ಪುತ್ತಿಗೆ, ಮುಗುನಲ್ಲಿ ಕೋಳಿ ಅಂಕ : 4 ಕೋಳಿಗಳ ಸಹಿತ 4 ಮಂದಿ ಸೆರೆ

ಸೀತಾಂಗೋಳಿ: ಪುತ್ತಿಗೆ, ಮುಗು, ಪೊಟ್ಟುವಳದಲ್ಲಿ ಕೋಳಿ ಅಂಕ ನಡೆಸುತ್ತಿದ್ದ ೪ ಮಂದಿಯನ್ನು ಸೆರೆ ಹಿಡಿಯಲಾಗಿದೆ. ಸ್ಥಳದಿಂದ ೪ ಕೋಳಿಗಳನ್ನು ಹಾಗೂ 6800 ರೂ. ಪೊಲೀಸರು ವಶಪಡಿಸಿದ್ದಾರೆ. ಕುಂಬಳೆ ಗೋಪಾಲಕೃಷ್ಣ ಕ್ಷೇತ್ರ ರಸ್ತೆಯ ನಿವಾಸಿ ಪ್ರವೀಣ್ ಕುಮಾರ್ (36), ಬೇಳ ಕೊಡಿಂಞಾರ್‌ನ ಕೆ. ಗೋಪಾಲ (64), ಸೂರಂಬೈಲು ಪೆರ್ಣೆಯ ಪಿ. ಶ್ರೀಧರ (42), ನೀರ್ಚಾಲು ನಡುವಳ ಬೇರಿಗೆ ಹೌಸ್‌ನ ಬಿ. ಉದಯ (35) ಎಂಬಿವರನ್ನು ಬದಿಯಡ್ಕ ಎಸ್‌ಐ ಸುಮೇಶ್ ಬಾಬು ನೇತೃತ್ವದಲ್ಲಿ ಸೆರೆ ಹಿಡಿಯಲಾಗಿದೆ. ಪೊಲೀಸ್ ತಂಡದಲ್ಲಿದ್ದ ಪ್ರೊಬೇಶನಲ್ ಎಸ್‌ಐ ರೂಪೇಶ್, ಚಾಲಕ ಗಾಸಿ ಮೊಹಮ್ಮದ್ ಕೂಡಾ ಜೊತೆಗಿದ್ದರು. ನಿನ್ನೆ ಸಂಜೆ ಕೋಳಿ ಅಂಕ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ.

You cannot copy contents of this page