ಪುತ್ರಿಯ ಕೊಂದ ಪ್ರಿಯತಮನ ತಂದೆಯನ್ನು ಇರಿದು ಕೊಲೆ

ಮಡಿಕೇರಿ: ಯುವತಿಯನ್ನು ಕೊಂದು ಹೂತುಹಾಕಿದ ಪ್ರಕರಣ ದಲ್ಲಿ ತಲೆಮರೆಸಿಕೊಂಡಿದ್ದ ಪ್ರಿಯತ ಮನ ತಂದೆಯನ್ನು ಕೊಲೆಗೀಡಾದ ಯುವತಿಯ ತಂದೆ ಇರಿದು ಕೊಲೆಗೈದ ಘಟನೆ ನಡೆದಿದೆ. ಮಂಡ್ಯ ಪಾಂಡವಪುರ ಸಮೀಪದ ಮಾಣಿಕ್ಯಹಳ್ಳಿಯ ನರಸಿಂಹ ಗೌಡ (60) ಕೊಲೆಗೀಡಾದ ವ್ಯಕ್ತಿ. ಶಾಲಾ ಅಧ್ಯಾಪಿಕೆ ಹಾಗೂ ಮಗುವಿನ ತಾಯಿಯಾಗಿದ್ದ ದೀಪಿಕ (28)ಳನ್ನು ನಾಲ್ಕು ತಿಂಗಳ ಹಿಂದೆ ಕೊಲೆಗೈದ ಪ್ರಕರಣದ ಆರೋಪಿ ನಿತೇಶ್‌ನ ತಂದೆಯಾಗಿದ್ದಾರೆ ನರಸಿಂಹ ಗೌಡ. ದೀಪಿಕ ಹಾಗೂ 21ರ ಹರೆಯದ ನಿತೇಶ್ ಪ್ರೀತಿಸುತ್ತಿದ್ದರು.

ಈ ಸಂಬಂಧವನ್ನು ಕೊನೆಗೊಳಿಸಲು ದೀಪಿಕ ಆಗ್ರಹಿಸಿದ್ದಳು. ಆದರೆ ನಿತೇಶ್ ಹಿಂಜರಿದಿರಲಿಲ್ಲ. ಇದರ ವಿರೋಧ ದಿಂದ ದೀಪಿಕಳನ್ನು ಉಪಾಯದಿಂದ ಕರೆದುಕೊಂ ಡು ಹೋಗಿ ತಲೆಗೆ ಕಲ್ಲು ಹಾಕಿ ಕೊಲೆಗೈದ ಬಳಿಕ ಮೃತದೇಹ ವನ್ನು ಹೂತು ಹಾಕಿರುವುದಾಗಿ ನಿತೇಶ್ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಘಟನೆಯ ಬಳಿಕ ಈತ ನಾಪತ್ತೆಯಾಗಿ ದ್ದನು.  ಪುತ್ರಿಯನ್ನು ಕೊಲೆಗೈದ ವ್ಯಕ್ತಿಯನ್ನು ಬದುಕಲು ಬಿಡೆನು ಎಂದು ಯುವತಿಯ ತಂದೆ ವೆಂಕಟೇಶ್ ಹಲವರಲ್ಲಿ ಹೇಳುತ್ತಿದ್ದರೆನ್ನ ಲಾಗಿದೆ. ಈ ಮಧ್ಯೆ ಪುತ್ರಿಯ ಘಾತಕನ ಸಹೋದರಿಯ ವಿವಾಹ ಮುಂದಿನ ವಾರ ಧರ್ಮಸ್ಥಳದಲ್ಲಿ ನಡೆಯಲಿದೆ ಎಂಬ ವಿವರ ವೆಂಕಟೇಶ್‌ಗೆ ಲಭಿಸಿದ್ದು, ಈ ವೇಳೆ ಈತನ ಪ್ರತಿಕಾರ ರೋಷ ಹೆಚ್ಚಾಯಿತು. ನಿನ್ನೆ ಇಲ್ಲಿನ ಒಂದು ಚಹಾದಂಗಡಿಯಲ್ಲಿ ಪುತ್ರಿಯ ಪ್ರಿಯತಮನ ತಂದೆಯನ್ನು ಇರಿದು ಕೊಲೆಗೈದಿದ್ದಾನೆ. ಈ ಬಗ್ಗೆ ಪೊಲೀಸರು ಕೇಸು ದಾಖಲಿಸಿದ್ದಾರೆ.

You cannot copy contents of this page