ಪುದುಪಳ್ಳಿ ಉಪಚುನಾವಣೆ: ಮೊದಲ ನಾಲ್ಕು ಗಂಟೆಗಳಲ್ಲಿ ೩೦ ಶೇ. ಮತದಾನ

ಕೋಟ್ಟಯಂ: ಉಪ ಚುನಾವಣೆ ನಡೆಯುತ್ತಿರುವ ಪುದುಪ್ಪಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸಾಧಾರಣ ರೀತಿಯಲ್ಲಿ ಮತದಾನ ನಡೆಯುತ್ತಿದೆ.   ಮೊದಲ ನಾಲ್ಕು ಗಂಟೆಗಳಲ್ಲಿ ೩೦ ಶೇಕಡಾ ಮತದಾನ ನಡೆದಿದೆ. ಬೆಳಿಗ್ಗೆ ೭ ಗಂಟೆಗೆ ಮತದಾನ ಆರಂಭಗೊಂಡಿದ್ದು, ಸಂಜೆ ೬ ಗಂಟೆವರೆಗೆ ಮುಂದುವರಿಯಲಿದೆ. ಈ ಮಂಡಲದಲ್ಲಿರುವ ೮ ಪಂಚಾಯತ್‌ಗಳಲ್ಲಾಗಿ ೧೮೨ ಮತಗಟ್ಟೆಗಳಿವೆ. ಯುಡಿಎಫ್ ಅಭ್ಯರ್ಥಿಯಾಗಿ ಕಾಂಗ್ರೆಸ್‌ನ ಚಾಂಡಿ ಉಮ್ಮನ್, ಎಲ್‌ಡಿಎಫ್ ಅಭ್ಯರ್ಥಿಯಾಗಿ ಸಿಪಿಎಂನ ಜೈಕ್ ಥೋಮಸ್, ಎನ್‌ಡಿಎ ಅಭ್ಯರ್ಥಿಯಾಗಿ ಬಿಜೆಪಿಯ ಜಿ. ಲಿಜಿನ್‌ಲಾಲ್, ಎಎಪಿಯಿಂದ  ಲೂಕ್ ಥೋಮಸ್ ಹಾಗೂ ಮೂವರು ಸ್ವತಂತ್ರರು ಸ್ಪರ್ಧಾಕಣದಲ್ಲಿದ್ದಾರೆ.

RELATED NEWS

You cannot copy contents of this page