ಪೂರಕ್ಕಳಿ ಕಲಾವಿದ ರಾಘವನ್ ಪಣಿಕ್ಕರ್ ನಿಧನ
ಕಾಸರಗೋಡು: ಖ್ಯಾತ ಪೂರಕ್ಕಳಿ ಕಲಾವಿದ ಉದುಮ ಕಳನಾಡ್ ತೊಟ್ಟಿಯ ನಿವಾಸಿ ಸಿ. ರಾಘವನ್ ಪಣಿಕ್ಕರ್ 86) ನಿಧನ ಹೊಂದಿದರು. ಕಾರಡ್ಕ ಚಂದನಡ್ಕ ಚೀರುಂಬಾ ಭಗವತಿ ಕ್ಷೇತ್ರ, ಕಾಞಂಗಾಡ್ ಲಕ್ಷ್ಮೀನಗರ ತೆರುವಿಲ್‌ಕಳಗಂ ಎಂಬೆಡೆಗಳಲ್ಲಿ ಪೂರಕ್ಕಳಿ ಪಣಿಕ್ಕರ್ ಆಗಿದ್ದರು. ಕಾಂಗ್ರೆಸ್ ಮುಖಂಡನಾಗಿದ್ದಾರೆ.
ಮೃತರು ಪತ್ನಿ ಟಿ.ವಿ. ಲೀಲಾ, ಮಕ್ಕಳಾದ ಸಿ. ಅರವಿಂದ ಕಳನಾಡ್, ಸಿ. ಅನಿತಾ ರಾಜನ್, ಸಿ. ಅಜಿತ್, ಸಿ. ಅಮೃತಾ ಉಮೇಶ್, ಅಳಿಯಂದಿರಾದ ರಾಜನ್ ಕೆ. ಕಳನಾಡ್, ಉಮೇಶ್ ನೀಲೇಶ್ವರ, ಸೊಸೆಯಂದಿರಾದ ಜಿಶಾ, ಸುಮಾ, ಜಿಜಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಪುತ್ರ ಸಿ. ಅಶೋಕನ್ ಈ ಹಿಂದೆ ನಿಧನರಾಗಿದ್ದಾರೆ.