ಪೆಟ್ರೋಲ್ ಬಂಕ್‌ನಲ್ಲಿ ದಾಂಧಲೆ: ೩೬,೦೦೦ ರೂ. ನಷ್ಟ

ಕಾಸರಗೋಡು: ನಗರದ ಪ್ರೆಸ್ ಕ್ಲಬ್ ಜಂಕ್ಷನ್‌ಬಳಿಯಿರುವ  ಪೆಟ್ರೋಲ್ ಬಂಕ್‌ಗೆ ಬೈಕ್‌ನಲ್ಲಿ ಪೆಟ್ರೋಲ್ ತುಂಬಿಸಿದ ಹಣದ ವಿಷಯದಲ್ಲಿ ಉಂಟಾದ ವಾಗ್ವಾದದಲ್ಲಿ ಯುವಕನೋರ್ವ ದಾಂಧಲೆ ಸೃಷ್ಟಿಸಿ ಭಾರೀ ನಷ್ಟ ಉಂಟುಮಾಡಿದ ಘಟನೆ ಮೊನ್ನೆ ರಾತ್ರಿ ನಡೆದಿದೆ.

ಇದಕ್ಕೆ ಸಂಬಂಧಿಸಿ  ಪ್ರಸ್ತುತ ಪೆಟ್ರೋಲ್ ಬಂಕ್ ಸಿಬ್ಬಂದಿ ಅಡ್ಕತ್ತಬೈಲ್‌ನ ಅಭಿಜಿತ್ ನೀಡಿದ ದೂರಿನಂತೆ ಹಲವು ಪ್ರಕರಣಗಳ ಆರೋಪಿ ಹಾಗೂ ಕಾಪಾ ಪ್ರಕಾರ ಬಂಧಿತನಾಗಿ  ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದ ಬಟ್ಟಂಬಾರೆಯ ಮಹೇಶ್ (೩೨) ಎಂಬಾತನ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈತ ಮೊನ್ನೆ ರಾತ್ರಿ ಬೈಕ್‌ನಲ್ಲಿ  ಪೆಟ್ರೋಲ್ ಬಂಕ್‌ಗೆ ಬಂದು ಪೆಟ್ರೋಲ್‌ನ ಹಣದ ವಿಷಯದಲ್ಲಿ ವಾಗ್ವಾದ ನಡೆಸಿ ಬಳಿಕ ಅಲ್ಲಿ ಹೊರಗೆ ಇರಿಸಲಾಗಿದ್ದ ಆಯಿಲ್ ತುಂಬಿಸಿಡಲಾಗಿದ್ದ ಕ್ಯಾನ್‌ಗಳನ್ನು ದೂಡಿ ಹಾಕಿ ಹಾಗೂ ಕೌಂಟಿಂಗ್ ಮೆಷಿನ್‌ನನ್ನು ಹೊಡೆದು ಹಾನಿಗೊಳಿಸಿರುವು ದಾಗಿಯೂ, ಅದರಿಂದ ಸುಮಾರು ೩೬,೦೦೦ ರೂ.ಗಳ ನಷ್ಟ ಉಂಟುಮಾಡಿರುವುದಾಗಿ ಪೊಲೀಸರಿಗೆ ನೀಡಲಾದ ದೂರಿನಲ್ಲಿ ಆರೋಪಿಸಲಾಗಿದೆ.

RELATED NEWS

You cannot copy contents of this page