ಬದಿಯಡ್ಕ: ಪೆರ್ಲ ಬಳಿಯ ಇಡಿಯಡ್ಕದಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಭಾರೀ ಮೌಲ್ಯದ ಚಿನ್ನಾಭರಣ ಹಾಗೂ ಹಣ ದೋಚಿದ ಘಟನೆ ನಡೆದಿದೆ.
ಇಡಿಯಡ್ಕ ದಾರುಲ್ ಹನ ಎಂಬಲ್ಲಿನ ಕೆ. ಅಬ್ಬಾಸ್ ಅಲಿಯವರ ಮನೆಯಲ್ಲಿ ನಿನ್ನೆ ಮುಂಜಾನೆ ಈ ಕಳವು ನಡೆದಿದೆ. ಮನೆಯ ಬೆಡ್ರೂಂನಲ್ಲಿದ್ದ ಕಪಾಟಿನ ಬೀಗ ಮುರಿದು ಅದರಲ್ಲಿದ್ದ ಎಂಟು ಪವನ್ ಚಿನ್ನಾಭರಣ ಹಾಗೂ ಒಂದುಲಕ್ಷ ರೂಪಾಯಿಯನ್ನು ಕಳ್ಳರು ದೋಚಿ ದ್ದಾರೆ. ಮನೆಯ ಹಿಂಭಾಗದ ಬಾಗಿಲು ತೆರೆದು ಕಳ್ಳರು ಒಳಗೆ ನುಗ್ಗಿದ್ದಾರೆ. ಮನೆಯ ಕೆಳ ಮಹಡಿಯಲ್ಲಿರುವ ಬೆಡ್ರೂಂನ ಕಪಾಟಿನಲ್ಲಿ ಹಣ ಹಾಗೂ ಚಿನ್ನಾಭರಣಗಳನ್ನು ಇರಿ ಸಲಾಗಿತ್ತು. ಕಳವು ಬಗ್ಗೆ ಅಬ್ಬಾಸ್ ಅಲಿ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ, ತನಿಖೆ ಆರಂಭಿಸಿದ್ದಾರೆ.