ಪೆರ್ಲ ಸ.ನಾ. ಪ್ರೌಢಶಾಲೆಯಲ್ಲಿ ಪ್ರವೇಶೋತ್ಸವ

ಪೆರ್ಲ: ಇಲ್ಲಿನ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಪ್ರವೇಶೋತ್ಸವವನ್ನು ಎಣ್ಮಕಜೆ ಪಂ.ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್ ಉದ್ಘಾಟಿಸಿದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ನಾರಾಯಣ ನಾಯಕ್ ನಲ್ಕ ಅಧ್ಯಕ್ಷತೆ ವಹಿಸಿದ್ದರು. ಪಂ. ಉಪಾಧ್ಯಕ್ಷೆ ರಮ್ಲಾ ಇಬ್ರಾಹಿಂ, ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ವೆಂಕಟರಾಜ ಮಿತ್ರ, ಮುಖ್ಯೋಪಾಧ್ಯಾಯ ಕೇಶವ ಪ್ರಕಾಶ್ ಉಪಸ್ಥಿತರಿದ್ದರು. ಈ ಸಂದರ್ಭ ಎಸ್ಸೆಸೆಲ್ಸಿ ಪರೀಕ್ಷೆಯ ಎಲ್ಲಾ ವಿಷಯದಲ್ಲಿ ಎ ಪ್ಲಸ್ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಹಿರಿಯ ಶಿಕ್ಷಕಿ ವಿದ್ಯಾರತ್ನ ಸ್ವಾಗತಿಸಿದರು. ಅಭಿಲಾಷಾ ಟೀಚರ್ ನಿರೂಪಿಸಿದರು. ಅನ್ನಪೂರ್ಣ ಟೀಚರ್ ವಂದಿಸಿದರು.

RELATED NEWS

You cannot copy contents of this page