ಪೆರ್ವೋಡಿಯಲ್ಲಿ ಕುಸಿದು ಬಿದ್ದ ರಸ್ತೆ : ದುರಸ್ತಿಗೊಳಿಸದ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಪ್ರತಿಭಟನೆ

ಬಾಯಾರು: ಮುಳಿಗದ್ದೆ ಬಳ್ಳೂರು ಲೋಕೋಪಯೋಗಿ ಇಲಾಖೆ ರಸ್ತೆಯಲ್ಲಿ ಸಂಚಾರಕ್ಕೆ ಭೀತಿ ಇದ್ದರೂ ಕಳೆದ ಒಂದು ವರ್ಷದಿಂದ ದುರಸ್ತಿಗೊಳಿಸದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪೈವಳಿಕೆ ಪಂಚಾಯತ್ ಬಿಜೆಪಿಯ ಪೆರುವೋಡಿ, ಬೆರಿಪದವು ಬೂತ್ ನೇತೃತ್ವದಲ್ಲಿ ನಿನ್ನೆ ಸಂಜೆ ಪ್ರತಿಭಟನೆ ನಡೆಸಲಾಯಿತು. ಪೆರ್ವೋಡಿ ಎಂಬಲ್ಲಿ ರಸ್ತೆ ಕುಸಿದು ವರ್ಷ ಒಂದು ಕಳೆದರೂ ವಾಹನ ಸಂಚಾರಕ್ಕೆ ಭೀತಿ ಸೃಷ್ಟಿಯಾದರೂ ದುರಸ್ತಿಗೊಳಿಸದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದಾಗಿ ಆರೋಪಿಸಿ ಪ್ರತಿಭಟನೆ ನಡೆಸಲಾಗಿದೆ. ಬಿಜೆಪಿ ಮುಖಂಡರಾದ ರವೀಂದ್ರ ಬೆರಿಪದವು, ದೇವದಾಸ ಬೆರಿಪದವು, ರಾಮಕೃಷ್ಣ ಬಲ್ಲಾಳ್, ಸೀನಾ ಪೆರ್ವೋಡಿ, ಪ್ರಭಾಕರ ನಾಯಕ್, ಬ್ಲೋಕ್ ಪಂಚಾಯತ್ ಸದಸ್ಯೆ ಚಂದ್ರಾವತಿ ಶೆಟ್ಟಿ, ಪೈವಳಿಕೆ ಪಂಚಾಯತ್ ಉಪಾಧ್ಯಕ್ಷೆ ಪುಷ್ಪಲಕ್ಷ್ಮಿ, ಕಮಲಾ ಪಿ, ಜಯಲಕ್ಷ್ಮಿ ಭಟ್ ಕೆ, ಸಂತೋಷ್ ಪಟ್ಲ, ಪ್ರವೀಣ್ ಪಟ್ಲ ಭಾಗವಹಿಸಿದರು. ಶೀಘ್ರವೇ ರಸ್ತೆ ದುರಸ್ತಿಗೊಳಿಸದಿದ್ದರೆ ಲೋಕೋಪಯೋಗಿ ಇಲಾಖೆ ಕಚೇರಿ ಮುಂದೆ ಬೃಹತ್ ಪ್ರತಿಭಟನೆಗೆ ಮುಂದಾಗುವುದಾಗಿ ಬಿಜೆಪಿ ತಿಳಿಸಿದೆ.

RELATED NEWS

You cannot copy contents of this page