ಪೈವಳಿಕೆ: ವಿವಿಧ ಮತಗಟ್ಟೆಗಳ ಮತದಾರಯಾದಿ ನವೀಕರಣ; ಗ್ರಾಮಸಭೆ ಮಾ.2ರಂದು
ಪೈವಳಿಕೆ: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಮತದಾರರ ಯಾದಿಯ ನವೀಕರಣೆಯಂಗವಾಗಿ ಚುನಾವಣೆ ಗ್ರಾಮಸಭೆ ಮಾರ್ಚ್ 2 ರಂದು ಬೆಳಿಗ್ಗೆ 10ಗಂಟೆಗೆ ನಡೆಯಲಿದೆ. ಮತಗಟ್ಟೆ ಸಂಖ್ಯೆ 105, 106 ಎ.ಯು.ಪಿ ಶಾಲೆ ಕುರುಡಪದವು, 107, 108, 109 ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಕಾಯರ್ಕಟ್ಟೆ, 110, 111, 112 ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಪೈವಳಿಕೆ ನಗರ ಹಾಗೂ ಬಾಯಾರು ಗ್ರಾಮದ ವ್ಯಾಪ್ತಿಗೊಳಪಟ್ಟ ಮತÀಗಟ್ಟೆ ಸಂಖ್ಯೆ 122- ಹೆದ್ದಾರಿ ಎ.ಯು.ಪಿ ಶಾಲೆ ಬಾಯಾರು, 123 ಆವಳ ಎ.ಎಲ್.ಪಿ ಶಾಲೆ ಬಾಯಾರು, 124- ಎ.ಎಲ್.ಪಿ ಶಾಲೆ ಬಾಯಾರು, 125 – ವಿದ್ಯಾರಣ್ಯಾ ಎ. ಎಲ್.ಪಿ ಶಾಲೆ ಬೆರಿಪದವು, 126 – ಶ್ರೀ ಪಂಚಲಿA ಗೇಶ್ವರ ಎ.ಎಲ್.ಪಿ ಶಾಲೆ ಬಾಯಾರು, 127, 128 – ಶ್ರೀ ದುರ್ಗಾ ಪರಮೇಶ್ವರಿ ಎ.ಯು.ಪಿ ಶಾಲೆ ಸಜಂಕಿಲ, 129 – ಶ್ರೀ ಶಾರದಾ ಎ.ಎಲ್.ಪಿ ಶಾಲೆ ಕನಿಯಾಲ, 130 – ಕನಿಯಾಲ ಅಂಗನ ವಾಡಿ ಎಂಬೀ ಸ್ಥಳಗಳಲ್ಲಾಗಿ ಮತದಾರರ ಸಮ್ಮುಖದಲ್ಲಿ, ಬಿ.ಎಲ್.ಒ, ಬಿ.ಎಲ್.ಎರ ನೇತೃತ್ವದಲ್ಲಿ ಚುನಾವಣಾ ಗ್ರಾಮಸಭೆ ನಡೆಯಲಿದೆ. ಪ್ರಸ್ತುತ ಸಭೆಗಳಲ್ಲಿ ಮತದಾ ರರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿ ಸಬೇಕೆಂದು ಪೈವಳಿಕೆ ಗ್ರೂಪ್ ವಿಲ್ಲೇಜ್ ಆಫೀಸರ್ ಮೊಯ್ದೀನ್ ಕುಂಞÂ ಬಿ, ಬಾಯಾರು ವಿಲ್ಲೇಜ್ ಆಫೀಸರ್ ಶಂಕರ ಎಂಬಿವರು ತಿಳಿಸಿದ್ದಾರೆ.