ಪೈವಳಿಕೆ ಸಹಕಾರಿ ಬ್ಯಾಂಕ್‌ನ ಮಾಜಿ ಕಾರ್ಯದರ್ಶಿ ನಿಧನ

ಉಪ್ಪಳ: ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್‌ನ ಮಾಜಿ ಕಾರ್ಯದರ್ಶಿ ಪೈವಳಿಕೆ ನಿವಾಸಿ ಪರಮೇಶ್ವರ (71) ಅಲ್ಪ ಕಾಲದ ಅಸೌಖ್ಯದಿಂದ ಇಂದು ಮುಂಜಾನೆ ಸ್ವ-ಗೃಹದಲ್ಲಿ ನಿಧನರಾದರು. ಇವರು ಸಿಪಿಐಯ ಸಕ್ರಿಯ ಕಾರ್ಯಕರ್ತ ನಾಗಿದ್ದರು.

ಮೃತರು ಪತ್ನಿ ಸುಗುಣ, ಮಕ್ಕಳಾದ ನವೀನ್ ಕುಮಾರ್, ಪ್ರವೀಣ್ ಕುಮಾರ್, ಸೊಸೆಯಂದಿ ರಾದ ಸೌಮ್ಯ, ಶಿಲ್ಪ, ಸಹೋದರ-ಸಹೋದರಿಯರಾದ ಕೃಷ್ಣ, ರಮೇಶ, ರತ್ನ, ಭವಾನಿ, ಲಕ್ಷ್ಮಿ, ಸರಸ್ವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ದಿವಂಗತರಾದ ಕೋಚು ಸಾಲಿಯಾನ್-ದೇವಕಿ ದಂಪತಿಯ ಪುತ್ರನಾದ ಇವರ ಓರ್ವ ಸಹೋದರ ಅಶೋಕ ಈ ಹಿಂದೆ ನಿಧನಹೊಂದಿದ್ದಾರೆ. ಮೃತರ ಮನೆಗೆ ಸಿಪಿಐ ನೇತಾರರು, ಕಾರ್ಯಕರ್ತರು, ಹಿತೈಷಿಗಳ ಸಹಿತ ಹಲವಾರು ಮಂದಿ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ನಿಧನಕ್ಕೆ ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್‌ನ ಆಡಳಿತ ಮಂಡಳಿ,ಸಿಬ್ಬಂದಿ ವರ್ಗ ಸಂತಾಪ ಸೂಚಿಸಿದೆ.

RELATED NEWS

You cannot copy contents of this page