ಪೈವಳಿಕೆಯಲ್ಲಿ ಮರ ಬಿದ್ದು ಮನೆಗಳಿಗೆ ಹಾನಿ
ಪೈವಳಿಕೆ: ಪಂಚಾಯತ್‌ನ 11ನೇ ವಾರ್ಡ್‌ಗೊಳಪಟ್ಟ ಪ್ರದೇಶದಲ್ಲಿ ಮೂರು ಮನೆಗಳಿಗೆ ಮರ ಬಿದ್ದು ಹಾನಿಯಾಗಿದೆ. ಬೀಡುಬೈಲು ಎಂಬಲ್ಲಿ ಪಂಚಾಯತ್ ಮಾಜಿ ಸದಸ್ಯ ಸುಂದರ ಎಂಬವರ ಹೆಂಚಿನ ಮನೆಗೆ ತೆಂಗಿನ ಮರ ಬಿದ್ದು ಹಾನಿಯುಂಟಾಗಿದೆ. ಮೊನ್ನೆ ರಾತ್ರಿ 12 ಗಂಟೆ ವೇಳೆಗೆ ಸುರಿದ ಮಳೆ, ಗಾಳಿಗೆ ಘಟನೆ ನಡೆದಿದೆ. ಇದಲ್ಲದೆ ಮನೆ ಹಿತ್ತಿಲಲ್ಲಿದ್ದ ಹಲಸಿನ ಮರ ಬಿದ್ದು ವಿದ್ಯುತ್ ಸಂಪರ್ಕ ವಿಚ್ಛೇಧಿಸಲಾಗಿತ್ತು. ಇದೇ ವೇಳೆ ಸಮೀಪದ ಸುಬ್ಬಣ್ಣ ಮೂಲ್ಯ ಎಂಬವರ ಹೆಂಚಿನ ಮನೆಯ ಮೇಲೆ ಹಲಸಿನ ಮರ ಬಿದ್ದು ಆ ಮನೆಗೂ ಹಾನಿಯಾಗಿದೆ. ಕೊಠಡಿ ಯಲ್ಲಿ ಮಲಗಿದ್ದ ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಇಲ್ಲಿಗೆ ಸಮೀಪದ ವೆರೋನಿಕಾ ಕ್ರಾಸ್ತಾ ಎಂಬವರ ಮನೆಗೆ ಮರ ಬಿದ್ದು ಹಾನಿ ಯಾಗಿದೆ. ಪೈವಳಿಕೆ ಗ್ರೂಪ್ ವಿಲ್ಲೇಜ್ ಆಫೀಸರ್ ಮೊಯ್ದೀನ್ ಕುಂಞಿ ಈ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಪಂ. ಅಧ್ಯಕ್ಷೆ ಜಯಂತಿ, ವಾರ್ಡ್ ಪ್ರತಿನಿಧಿ ರಹ್ಮತ್, ಸದಸ್ಯ ಅಬ್ದುಲ್ಲ, ನಾರಾಯಣ ಶೆಟ್ಟಿ ಅಂಬಿಕಾನ, ಸುಂದರ ಬೀಡುಬೈಲು ಜೊತೆಗಿದ್ದರು.