ಪೊಲೀಸರನ್ನು ಅವಮಾನಿಸಿ ರೀಲ್ಸ್: 9 ಮಂದಿ ಸೆರೆ
ಕುಂಬಳೆ: ಪೊಲೀಸರನ್ನು ಅವಮಾನಿಸುವ ರೀತಿಯಲ್ಲಿ ರೀಲ್ಸ್ ಚಿತ್ರೀಕರಿಸಿದ ೯ ಮಂದಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಬಳಿಕ ಅವರಿಗೆ ನೋಟೀಸು ನೀಡಿ ಬಿಡುಗಡೆಗೊಳಿಸಲಾಗಿದೆ. ಕುಂಬಳೆ ಬದ್ರಿಯಾನಗರ ನಿವಾಸಿಗಳಾದ ಅಬೂಬಕರ್ ಸಿದ್ದಿಕ್ (37), ಅಬ್ದುಲ್ ರೌಫ್ ಎಂ (34), ಮೊಹಮ್ಮದ್ ರಿಯಾಸ್ (27), ಶುಹೈಬ್ ಎಂ.ಬಿ (28), ಮೊಹಮ್ಮದ್ ಮುಸಾಮಿಲ್ ಎಸ್ (33), ಮೊಹಮ್ಮದ್ ಫಾಯೀಸ್ ಎಂ.ಎ (21), ಮೊಯ್ದೀನ್ ಕುಂಞಿ (35), ಮೊಹಮ್ಮದ್ ಮಶೂಕ್ (19), ಮೊಯ್ದೀನ್ ಜುನೈದ್ (31) ಎಂಬಿವರು ಬಂಧಿತ ಆರೋಪಿಗ ಳಾಗಿದ್ದಾರೆ. ಇವರು ಇತ್ತೀಚೆಗೆ ಚಿತ್ರೀಕರಿಸಿದ ರೀಲ್ಸ್ವೊಂದು ಪೊಲೀಸರನ್ನು ಅವಮಾನಗೈಯ್ಯುವ ರೀತಿಯಲ್ಲಿದೆ ಎನ್ನಲಾಗಿದೆ. ಈ ಬಗ್ಗೆ ಲಭಿಸಿದ ಮಾಹಿತಿಯಂತೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಇದೇವೇಳೆ ರೀಲ್ಸ್ ಚಿತ್ರೀಕರಿಸಲು ಬಳಸಿದ ಮೊಬೈಲ್ ಫೋನ್ ಮೊಹಮ್ಮದ್ ಮಶೂಕ್ನದ್ದಾಗಿದ್ದು, ಅದನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.