ಪೊಲೀಸರಿಗೆ ಆಕ್ರಮಿಸಿದ ಪ್ರಕರಣ: ಜಿಲ್ಲಾ ಪಂ. ಸದಸ್ಯನ ಜಾಮೀನು ಅರ್ಜಿ ಪರಿಗಣನೆ ಮುಂದೂಡಿಕೆ: ಪೊಲೀಸರು ಮುಂಬಯಿಗೆ

ಉಪ್ಪಳ: ಮಂಜೇಶ್ವರ ಎಸ್‌ಐ ಹಾಗೂ ಪೊಲೀಸರ ಮೇಲೆ ಆಕ್ರಮಿಸಿದ ಪ್ರಕರಣದಲ್ಲಿ ರಿಮಾಂಡ್‌ನಲ್ಲಿರುವ ಜಿಲ್ಲಾ ಪಂಚಾಯತ್ ಸದಸ್ಯನೂ, ಮುಸ್ಲಿಂ ಯೂತ್ ಲೀಗ್ ಜಿಲ್ಲಾ  ಜೊತೆ ಕಾರ್ಯದರ್ಶಿಯಾದ ಗೋಲ್ಡನ್ ಅಬ್ದುಲ್ ರಹ್ಮಾನ್ (೩೩)ರ ಜಾಮೀನು ಅರ್ಜಿಯನ್ನು ಪರಿಗಣಿಸುವುದನ್ನು ನ್ಯಾಯಾಲಯ ಮುಂದೂಡಿದೆ. ನಿನ್ನೆ ಪರಿಗಣಿಸಬೇ ಕಾಗಿದ್ದ ಅರ್ಜಿಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.

ಇದೇ ಪ್ರಕರಣದಲ್ಲಿ ಇನ್ನೂ ನಾಲ್ಕು ಮಂದಿ ಆರೋಪಿಗಳನ್ನು ಸೆರೆ ಹಿಡಿಯಲು ಬಾಕಿಯಿದೆ. ಹಾಗಿರುವಾಗ ಜಾಮೀನು ಮಂಜೂರು ಮಾಡಿದರೆ ಇತರ ಆರೋಪಿಗಳನ್ನು ಸೆರೆಹಿಡಿಯಲು ಅಡ್ಡಿಯಾಗಲಿದೆಯೆಂದು ಪ್ರೋಸಿಕ್ಯೂ ಶನ್ ತಿಳಿಸಿದ ಹಿನ್ನೆಲೆಯಲ್ಲಿ ಅರ್ಜಿ ಪರಿಗಣಿಸುವುದನ್ನು ಮುಂದೂಡಲಾಗಿದೆ.

ಕಳೆದ ಆದಿತ್ಯವಾರ ಮುಂಜಾನೆ ಎಸ್‌ಐ ಅನೂಬ್ ಹಾಗೂ ಸಿವಿಲ್ ಪೊಲೀಸ್ ಆಫೀಸರ್ ಕಿಶೋರ್‌ರ ಮೇಲೆ ಉಪ್ಪಳ ಹಿದಾಯತ್ ನಗರದಲ್ಲಿ ತಂಡ ಆಕ್ರಮಿಸಿದೆ. ಐದು ಮಂದಿ ತಂಡ ಆಕ್ರಮಿಸಿದೆಯೆಂದು ಮಂಜೇಶ್ವರ ಪೊಲೀಸರು  ಕೇಸು ದಾಖಲಿಸಿಕೊಂಡಿ ದ್ದಾರೆ.  ಈ ಪೈಕಿ ಗೋಲ್ಡನ್ ಅಬ್ದುಲ್ ರಹ್ಮಾನ್‌ರನ್ನು ಮಾತ್ರವೇ ಬಂಧಿಸ ಲಾಗಿದೆ. ಮುಖ್ಯ ಆರೋಪಿಯಾದ  ಉಪ್ಪಳದ ರಶೀದ್ ಗೋವಾಕ್ಕೂ ಅಲ್ಲಿಂದ ಗಲ್ಫ್‌ಗೆ ಪರಾರಿಯಾಗಿರುವು ದಾಗಿ ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ. ಆತನನ್ನು ಪತ್ತೆಹಚ್ಚಲು ಇಂಟರ್ ಪೋಲ್‌ನ ಸಹಾಯ ಯಾಚಿಸಲಾಗಿದೆ.

You cannot copy contents of this page