ಪೊಲೀಸ್ ಅಧಿಕಾರಿಯ ಕುತ್ತಿಗೆ ಕೊಯ್ದು ಕೊಲೆ: ಸ್ನೇಹಿತ ಸೆರೆ
ಕೊಲ್ಲಂ: ಪೊಲೀಸ್ ಅಧಿಕಾರಿ ಯೊಬ್ಬರನ್ನು ಸ್ನೇಹಿತ ಕುತ್ತಿಗೆ ಕೊಯ್ದು ಕೊಲೆಗೈದ ಘಟನೆ ಕೊಲ್ಲಂನಲ್ಲಿ ನಡೆದಿದೆ. ಕೊಲ್ಲಂ ನೀಲಮೇಲ್ ವಳಯಡಂ ನಿವಾಸಿ ಇರ್ಶಾದ್ (28) ಕೊಲೆಗೀಡಾದ ವ್ಯಕ್ತಿ. ಇವರು ಅಡೂರ್ ಪೊಲೀಸ್ ಕ್ಯಾಂಪ್ನ ಅಧಿಕಾರಿಯಾಗಿದ್ದರು.ಘಟನೆಗೆ ಸಂಬಂಧಿಸಿ ಇರ್ಶಾದ್ರ ಸ್ನೇಹಿತನೂ ಚಿತರ ವಿಶ್ವಾಸ್ ನಗರ ನಿವಾಸಿ ಪೊಲೀಸ್ ಅಧಿಕಾರಿಯಾದ ಸಹದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇರ್ಶಾದ್ ಒಂದು ವಾರದಿಂದ ಸಹದ್ನ ಮನೆ ಯಿಂದ ಕೆಲಸಕ್ಕೆ ತೆರಳುತ್ತಿದ್ದರೆನ್ನ ಲಾಗಿದೆ. ನಿನ್ನೆ ಬೆಳಿಗ್ಗೆ ಇರ್ಶಾದ್ ಏಳದ ಹಿನ್ನೆಲೆ ಯಲ್ಲಿ ಸಹದ್ನ ತಂದೆ ಅಬ್ದುಲ್ ಸಲಾಂ ನೋಡಿದಾಗ ಇರ್ಶಾದ್ ರಕ್ತದ ಮಡುವಿ ನಲ್ಲಿ ಬಿದ್ದಿರುವುದು ಕಂಡುಬಂದಿದೆ. ಎಂಡಿ ಎಂಎ ಪ್ರಕರಣಕ್ಕೆ ಸಂಬಂಧಿಸಿ ಸಹದ್ ವಿರುದ್ಧ ಕಡಯ್ಕಲ್ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದರು. ಮಾದಕ ವಸ್ತುವಿಗೆ ಸಂಬಂಧಿಸಿ ಉಂಟಾದ ತರ್ಕದಿಂದ ಕೊಲೆ ನಡೆದಿರಬಹುದೆಂದು ಸಂಶಯಿಸಲಾಗಿದೆ.