ಪೊಲೀಸ್ ಕಸ್ಟಡಿಯಿಂದ ವಾರಂಟ್ ಆರೋಪಿ ಪರಾರಿ
ಮಂಜೇಶ್ವರ: ಪೊಲೀಸರ ಕಸ್ಟಡಿಯಲ್ಲಿದ್ದ ಆರೋಪಿಯೋರ್ವ ಪರಾರಿಯಾಗಿದ್ದಾನೆ. ಹೊಸಬೆಟ್ಟು ಸಲ್ಮಾ ಮಂಜಿಲ್‌ನ ಸಿದ್ಧಿಕ್ ಸಾರಿಕ್ ಫರ್ಹಾನ್ (29) ಎಂಬಾತ ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಸುತ್ತಿರುವುದಾಗಿ ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ.
2019ಕ್ಕೆ ಮಂಜೇಶ್ವರ ಪೊಲೀಸರು ದಾಖಲಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಸಿದ್ಧಿಕ್ ಸಾರಿಕ್ ಫರ್ಹಾನ್ ವಾರಂಟ್ ಆರೋಪಿಯಾಗಿದ್ದಾನೆ. ಈತನನ್ನು ಮೊನ್ನೆ ಸಂಜೆ ಪೊಲೀಸರು ಸೆರೆ ಹಿಡಿದಿದ್ದರು. ಬಳಿಕ ಮಂಜೇಶ್ವರ ಠಾಣೆಯಲ್ಲಿ ಈತನನ್ನು ಪೊಲೀಸ್ ಕಾವಲಿನಲ್ಲಿರಿಸಲಾಗಿತ್ತು. ನಿನ್ನೆ ಮುಂಜಾನೆ 5.30ರ ವೇಳೆ ಈತ ಕುಡಿಯಲು ನೀರು ಕೇಳಿದ್ದನೆನ್ನ ಲಾಗಿದೆ. ಇದರಂತೆ ನೀರು ತರಲು ಪೊಲೀಸ್ ತೆರಳಿದ ವೇಳೆ ಆರೋಪಿ ಸೆಲ್‌ನಿಂದ ಪರಾರಿಯಾಗಿದ್ದಾನೆಂದು ತಿಳಿಸಲಾಗಿದೆ.