ಪೊಲೀಸ್ ಜೀಪಿಗೆ ಕಾರು ಢಿಕ್ಕಿ ಹೊಡೆಸಿ ಪರಾರಿಗೆತ್ನಿಸಿದ ‘ಕಾಪಾ’ ಆರೋಪಿ ಸೆರೆ
ಕಾಸರಗೋಡು: ಪೊಲೀಸ್ ಜೀಪಿಗೆ ಕಾರು ಢಿಕ್ಕಿ ಹೊಡೆಸಿ ಪರಾರಿಯಾಗ ಲೆತ್ನಿಸಿದ ಕಾಪಾ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಸರ ಗೋಡು ಅಣಂಗೂರು ಟಿ.ಎ. ಸ್ಟೇಷನ್ ಬಳಿ ನಿವಾಸಿ ನಿವಾಸಿ ತಾಜುದ್ದೀನ್ ಮಂಜಲ್‌ನ ಅಹಮ್ಮದ್ ಕಬೀರ್ (24) ಬಂಧಿತನಾದ ಆರೋಪಿ. ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಈತನ ವಿರುದ್ಧ ಕಾಪಾ ಸೆಕ್ಷನ್ ೩ರ ಪ್ರಕಾರ ಜಿಲ್ಲಾಧಿಕಾರಿ ಕಾಪಾ ಹೇರಿ ಬಂಧಿಸುವಂತೆ ಆದೇಶ ನೀಡಿದ್ದರು. ಈ ಮಧ್ಯೆ ಆರೋಪಿ ವಿದ್ಯಾನಗರದಲ್ಲಿರುವ ಬಗ್ಗೆ ಕಾಸರಗೋಡು ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಅದರಂತೆ ಪೊಲೀಸರು ವಿದ್ಯಾನಗರ ಬಿ ಸಿ ರೋಡ್‌ನಲ್ಲಿ ವಾಹನ ತಪಾಸಣೆಯಲ್ಲಿ ತೊಡಗಿದ್ದಾಗ ಆ ದಾರಿಯಾಗಿ ಕಾರಿನಲ್ಲಿ ಬಂದ ಅಹಮ್ಮದ್ ಕಬೀರ್‌ನಲ್ಲಿ ಕಾರು ನಿಲ್ಲಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಆಗ ಆತ ಕಾರು ನಿಲ್ಲಿಸದೆ ಮುಂದಕ್ಕೆ ಚಲಾಯಿಸಿದ್ದಾನೆ. ತಕ್ಷಣ ಪೊಲೀಸರು ಆ ಕಾರನ್ನು ಬೆನ್ನಟ್ಟಿ ಅದರ ಎದುರುಗಡೆ ಪೊಲೀಸರು ತಮ್ಮ ವಾಹನ ಅಡ್ಡವಾಗಿ ನಿಲ್ಲಿಸಿದಾಗ ಆರೋಪಿ ಕಾರನ್ನು ಪೊಲೀಸರ ಜೀಪಿಗೆ ಢಿಕ್ಕಿ ಹೊಡೆಸಿ ನಂತರ ಅದನ್ನು ಹಿಂದಕ್ಕೆ ಹರಿಸಲೆತ್ನಿಸಿದಾಗ ಕಾರು ಅಲ್ಲೇ ಪಕ್ಕದ ಡಿವೈಡರ್‌ಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಕೂಡಲೇ ಆರೋಪಿ ಕಾರಿನ ಬಾಗಿಲು ತೆರೆದು ಅಲ್ಲಿಂದ ಪಲಾಯನ ಗೈಯ್ಯಲೆತ್ನಿಸಿದಾಗ ಪೊಲೀಸರು ಆತನನ್ನು ಅತೀವ ಸಾಹಸಿಕವಾಗಿ ಸೆರೆ ಹಿಡಿದು ಠಾಣೆಗೊಯ್ದು ಬಂಧನ ದಾಖಲಿಸಿ ಕೊಂಡಿದ್ದಾರೆ.
ಕಾಸರಗೋಡು, ಬದಿಯಡ್ಕ ಮತ್ತು ವಿದ್ಯಾನಗರ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿ ರುವ ಅಹಮ್ಮದ್ ಕಬೀರ್ ವಿರುದ್ಧ ಅಬ ಕಾರಿ ಕೇಸುಗಳೂ ಇವೆ ಎಂದು ಪೊಲೀ ಸರು ತಿಳಿಸಿದ್ದಾರೆ. ಪೊಲೀಸ್ ವಾಹನಕ್ಕೆ ಹಾನಿಗೊಳಿಸಿ ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡಚಣೆ ಸೃಷ್ಟಿಸಿದಂತೆ ಸಂಬಂಧಿಸಿ ಆರೋಪಿ ವಿರುದ್ಧ ಕಾಸg ಗೋಡು ಪೊಲೀಸರು ಇದೀಗ ಹೊಸ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಸರರಗೋಡು ಡಿವೈಎಸ್‌ಪಿ ಸಿ.ಕೆ. ಸುನಿಲ್ ಕುಮಾರ್, ಕಾಸರ ಗೋಡು ಪೊಲೀಸ್ ಇನ್ಸ್‌ಪೆಕ್ಟರ್ ಪಿ. ನಳಿನಾಕ್ಷನ್, ಎಸ್.ಐ ಪ್ರದೀಪ್ ಕುಮಾರ್, ಪೊಲೀಸರಾದ ಗುರುರಾಜ್, ರಾಜೇಶ್, ಜೇಮ್ಸ್, ನಿಜಿಲ್, ಆದರ್ಶ್ ಮತ್ತು ರಾಜೇಶ್ ಎಂಬವರನ್ನೊಳಗೊಂಡ ತಂಡ ಆರೋಪಿಯನ್ನು ಬಂಧಿಸಿದೆ.