ಪೊವ್ವಲ್‌ನಲ್ಲಿ ಬೈಕ್‌ಗಳು ಢಿಕ್ಕಿ: ಯುವಕ ಮೃತ್ಯು
ಕಾಸರಗೋಡು: ಪೊವ್ವಲ್‌ನಲ್ಲಿ ಬೈಕ್‌ಗಳು ಢಿಕ್ಕಿ ಹೊಡೆದು ಓರ್ವ ಮೃತಪಟ್ಟ ಘಟನೆ ಸಂಭವಿಸಿದೆ.
ಮೂಲಡ್ಕ ನಿವಾಸಿ ದಿ| ಬಿ.ಕೆ. ಮುಹಮ್ಮದ್ ಕುಂಞಿ-ಖದೀಜ ದಂಪತಿಯ ಪುತ್ರ ಕಬೀರ್ (42) ಮೃತಪಟ್ಟ ವ್ಯಕ್ತಿ. ಇಂದು ಬೆಳಿಗ್ಗೆ 7ಗಂಟೆಗೆ ಚೆರ್ಕಳ-ಜಾಲ್ಸೂರು ಅಂತಾರಾಜ್ಯ ರಸ್ತೆಯ ಪೊವ್ವಲ್‌ನಲ್ಲಿ ಅಪಘಾತವುಂಟಾಗಿದೆ. ಕಬೀರ್ ಪೊವ್ವಲ್ ಎಲ್‌ಬಿಎಸ್ ಇಂಜಿನಿಯರಿಂಗ್ ಕಾಲೇಜು ಸಮೀಪ ಹೊಸತಾಗಿ ನಿರ್ಮಿಸಿದ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ನಿನ್ನೆಯಷ್ಟೇ ನಡೆದಿದೆ. ಇಂದು ಬೆಳಿಗ್ಗೆ ಅಲ್ಲಿಂದ ಅವರು ಬೋವಿಕ್ಕಾನ ಪೇಟೆಗೆ ಬರುತ್ತಿದ್ದಾಗ ಘಟನೆ ಸಂಭವಿಸಿದೆ. ಮುಳ್ಳೇರಿಯ ನಿವಾಸಿ ಯುವಕ ಸಂಚರಿಸುತ್ತಿದ್ದ ಬೈಕ್ ಹಾಗೂ ಕಬೀರ್‌ರ ಬೈಕ್ ಪರಸ್ಪರ ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಕಬೀರ್‌ರನ್ನು ತಕ್ಷಣ ಚೆರ್ಕಳದ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.
ಮೃತರು ಪತ್ನಿ ಸುಹರಾಬಿ, ಸಹೋದರ-ಸಹೋದರಿಯರಾದ ಅಬೂಬಕರ್, ಅಬ್ದುಲ್ಲ, ಫಾತಿಮ, ಆಯಿಶಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.