ಪೋಕ್ಸೋ ಪ್ರಕರಣ ಆರೋಪಿ ವಿರುದ್ಧ ಸಮಗ್ರ ತನಿಖೆಗೆ ಬಿಜೆಪಿ ಆಗ್ರಹ
ಮಂಜೇಶ್ವರ: ಕುಂಜತ್ತೂರು ಕುಚ್ಚಿಕ್ಕಾಡ್‌ನಲ್ಲಿ 11 ವರ್ಷ ಪ್ರಾಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಮುಸ್ಲಿಂ ಲೀಗ್ ಮುಖಂಡನ ವಿರುದ್ಧ ಮಂಜೇಶ್ವರ ಶಾಸಕ ಹಾಗೂ ಮುಸ್ಲಿಂ ಲೀಗ್ ಯಾವುದೇ ಹೇಳಿಕೆ ನೀಡದಿರುವುದು ಆರೋಪಿಯ ರಕ್ಷಣೆಗೆ ತೆರೆಮರೆಯಲ್ಲಿ ನಡೆಸುವ ತಂತ್ರವಾಗಿದ್ದು, ಇದು ಖಂಡನೀಯವೆಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಆರೋಪಿಸಿದೆ. ಈತನ ವಿರುದ್ಧ ಸಮಗ್ರ ತನಿಖೆ ನಡೆಸಿ ಅಂಗಡಿಗೆ ತಲುಪಿದ ಇತರ ಮಕ್ಕಳನ್ನು ಕೂಡಾ ಕೌನ್ಸಿಲಿಂಗ್‌ಗೆ ಒಳಪಡಿಸಬೇಕೆಂದು ಬಿಜೆಪಿ ಆಗ್ರಹಿಸಿದೆ. ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾದ ವ್ಯಕ್ತಿಯನ್ನು ಧಾರ್ಮಿಕ ನೈತಿಕತೆಯಿಂದ ಲೀಗ್ ಪಕ್ಷದಿಂದ ವಜಾಗೊಳಿಸಬೇಕು, ಶಾಸಕರು ಈ ಬಗ್ಗೆ ಮೌನ ಮುರಿಯಬೇಕು ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಆದರ್ಶ್ ಬಿ.ಎಂ. ಆಗ್ರಹಿಸಿದ್ದಾರೆ.