ಪೋಕ್ಸೋ ಪ್ರಕರಣ: ಆರೋಪಿಗೆ ಆರು ವರ್ಷ ಸಜೆ

ಕಾಸರಗೋಡು: ಪ್ರಾಯಪೂರ್ತಿ ಯಾಗದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಹೊಸದುರ್ಗ ಫಾಸ್ಟ್‌ಟ್ರಾಕ್ ಸ್ಪೆಷಲ್ ವಿಶೇಷ ನ್ಯಾಯಾಲಯ ವಿವಿಧ ಸೆಕ್ಷನ್ ಗಳಲ್ಲಾಗಿ ಒಟ್ಟು ಆರು ವರ್ಷ ಸಜೆ ಹಾಗೂ 25000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಕರಿಬೇಡಗಂ ಅಲಿನ್ ತಾಳೆ ಹೌಸಿನ ಬಿ. ಗೋವಿಂ ದನ್ ಅಲಿಯಾಸ್ ಗೋಪಿ (52) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.

೨೦೧೯ರಲ್ಲಿ ಎಂಟು ವರ್ಷದ ಬಾಲಕಿಯೋರ್ವೆ ಆರೋಪಿಯ ಅಂಗಡಿಗೆ ಸಾಮಗ್ರಿ ಖರೀದಿಸಲೆಂದು ಬಂದ ವೇಳೆ ಆಕೆಯನ್ನು ಅಂಗಡಿಯೊ ಳಗೆ  ಕರೆದು ಅಲ್ಲಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಂತೆ ನೀಡಲಾದ ದೂರಿನಂತೆ ಬೇಡಗಂ ಪೊಲೀಸರು ಆರೋಪಿ ವಿರುದ್ಧ ಪೋಕ್ಸೋ ಮತ್ತಿತರ‍್ತ ಸೆಕ್ಷನ್‌ಗಳ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದರು. ಆ ಪ್ರಕರಣದಲ್ಲಿ ಆರೋಪಿಗೆ ಈ ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆಯನ್ನು ಆರೋಪಿ ಒಟ್ಟಿಗೆ ಅನುಭವಿಸಿದರೆ ಸಾಕೆಂದು ತೀರ್ಪಿನಲ್ಲಿ ತಿಳಿಸಲಾಗಿದೆ.

You cannot copy contents of this page