ಪೋಕ್ಸೋ ಪ್ರಕರಣ: ಮಂಡಲ ಕಾಂಗ್ರೆಸ್‌ನಿಂದ ಪ್ರತಿಭಟನೆ

ಉಪ್ಪಳ: ವಂಡಿ ಪೆರಿಯಾರ್, ಪೋಕ್ಸೋ ಅಪರಾಧಿಯ ವಿರುದ್ಧದ ಅಪರಾಧ ನ್ಯಾಯಾಲಯದಲ್ಲಿ ಸಾಬೀತುಪಡಿಸಲು ವಿಫಲವಾದ ಹಿನ್ನೆಲೆಯಲ್ಲಿ ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.  ಅಪ ರಾಧಿ ಅರ್ಜುನನ್ ವಿರುದ್ಧ  ಆರೋಪ ಸಾಬೀತುಪಡಿಸಲಾಗ ದಿರುವುದು ಪೊಲೀಸ್ ಹಾಗೂ ಪ್ರೊಸಿಕ್ಯೂಟರ್‌ಗಳ ಅನಾಸ್ಥೆ ಕಾರಣವೆಂದು ಆರೋಪಿಸಿ ಪ್ರತಿಭಟಿಸಲಾಗಿದೆ. ಮಂಡಲ ಕಾಂಗ್ರೆಸ್ ಅಧ್ಯಕ್ಷ ಬಾಬು ಬಂದ್ಯೋಡು ಅಧ್ಯಕ್ಷತೆ  ವಹಿಸಿದರು. ಮಹಮ್ಮದ್ ಸೀಗಂದಡಿ ಉದ್ಘಾಟಿಸಿದರು. ಪಿ.ಎಂ. ಖಾದರ್ ಹಾಜಿ, ಓಂಕೃಷ್ಣ, ಅಲ್ಮೆಡ ಸೋಜ, ಇಬ್ರಾಹಿಂ, ಪ್ರದೀಪ್ ಕುಮಾರ್ ಶೆಟ್ಟಿ, ಹಾರಿಸ್, ಮಾತನಾಡಿದರು. ಯೂಸಫ್ ಸ್ವಾಗತಿಸಿ, ನವೀನ್ ಶೆಟ್ಟಿ ವಂದಿಸಿದರು.

You cannot copy contents of this page