ಪ್ರತಾಪನಗರದ ವಿವಿಧೆಡೆ ಪೋಲಾಗುತ್ತಿರುವ ಕುಡಿಯುವ ನೀರು: ಪೈಪ್ ದುರಸ್ತಿಗೆ ಒತ್ತಾಯ
ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ 7ನೇ ವಾರ್ಡ್ ಪ್ರತಾಪನಗರದಲ್ಲಿ ಹಲವು ಕಡೆಗಳಲ್ಲಿ ಪೈಪ್ ಒಡೆದು ಭಾರೀ ಪ್ರಮಾಣದಲ್ಲಿ ನೀರು ಪೋಲಾಗುತ್ತಿ ರುವುದಾಗಿ ಸ್ಥಳೀಯರು ದೂರಿ ದ್ದಾರೆ. ಪ್ರತಾಪ ನಗರದ ಪ್ರಧಾನ ರಸ್ತೆ ಬದಿಯಲ್ಲಿ ಎರಡು ಕಡೆ ಹಾಗೂ ಒಳ ರಸ್ತೆಯಲ್ಲಿಯೂ ನೀರು ಪೋಲಾಗುತ್ತಿದೆ. ಪೈಪ್ ಬಿರುಕು ಬಿಟ್ಟು ತಿಂಗಳು ಕಳೆದರೂ ದುರಸ್ತಿಗೆ ಕ್ರಮಕೈಗೊಳ್ಳದಿರುವುದಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ನೀರು ಪೋಲಾಗುತ್ತಿ ರುವುದರಿಂದ ವೇಗತೆ ಕಡಿಮೆಯಾಗಿ ಎತ್ತರದ ಸ್ಥಳಗಳಿಗೆ ನೀರು ತಲುಪದಿರುವುದು ಸ್ಥಳೀಯರನ್ನು ಸಮಸ್ಯೆಗೀಡು ಮಾಡಿದೆ. ಸಂಬAಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳು ಕೂಡಲೇ ಪೈಪ್ ದುರಸ್ತಿಗೊಳಿಸಿ ಪೋಲಾಗುತ್ತಿರುವ ನೀರನ್ನು ತಡೆಯಬೇಕೆಂದು ಊರವರು ಒತ್ತಾಯಿಸಿದ್ದಾರೆ.