ಪ್ರಧಾನಮಂತ್ರಿ ಜ.೩ರಂದು ಕೇರಳಕ್ಕೆ ಬೃಹತ್ ಮಹಿಳಾ ಸಮಾವೇಶದಲ್ಲಿ ಭಾಗಿ

ತೃಶೂರು:ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನವರಿ ೩ರಂದು ಕೇರಳ ಸಂದರ್ಶಿಸುವರೆಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ತಿಳಿಸಿದ್ದಾರೆ. ಇದರಂತೆ ಅಂದು ತೃಶರು ವಡಕ್ಕುಂನಾಥ ಕ್ಷೇತ್ರ ಮೈದಾನದಲ್ಲಿ ಎರಡು ಲಕ್ಷದಷ್ಟು ಮಹಿಳೆಯರು ಭಾಗವಹಿಸುವ ‘ಸ್ತ್ರೀ ಶಕ್ತಿ’ ಮೋದಿ ಜತೆ ಎಂಬ ಹೆಸರಲ್ಲಿ ನಡೆಸಲಾಗುವ ಮಹಿಳಾ ಸಮ್ಮೇಳನದಲ್ಲಿ ಪ್ರಧಾನಮಂತ್ರಿ ಭಾಗವಹಿಸಿ ಮಾತನಾಡುವರು. ವಿವಿಧ ವಿಭಾಗಗಳ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸುವಂತೆ ಮಾಡಿದ ಪ್ರಧಾನಮಂತ್ರಿಯವರನ್ನು ಇದೇ ಸಂದರ್ಭದಲ್ಲಿ ಬಿಜೆಪಿ ಗಣ್ಯರು ಅಭಿನಂದಿಸುವರು. ತೃಶೂರು ಸಂದರ್ಶನವನ್ನು ಈ ಹಿಂದೆ ಜನವರಿ ೨ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಕೆಲವೊಂದು ಕಾರ್ಯದ ನಿಮಿತ್ತ ಸಂದರ್ಶನವನ್ನು ಜನವರಿ ೩ಕ್ಕೆ ಮುಂದೂಡಲಾಯಿತು.

RELATED NEWS

You cannot copy contents of this page