ಪ್ರಯಾಣಿಕನ 14,500 ರೂ. ಕಸಿದು ಹಲ್ಲೆ: ಇಬ್ಬರ ವಿರುದ್ಧ ಕೇಸು

ಕಾಸರಗೋಡು: ಪ್ರಯಾಣಿಕನ ಜೇಬಿನಿಂದ 14,500 ರೂ.  ಕಸಿದು ಅವರಿಗೆ ಹಲ್ಲೆ ನಡೆಸಿದ ಬಗ್ಗೆ ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ. ಇದರಂತೆ ಇಬ್ಬರ ವಿರುದ್ಧ  ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಧೂರು ಪರಕ್ಕಿಲದ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಉದಯ ಕುಮಾರ್ ಪಿ.ಪಿ (62) ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಅಕ್ಟೋಬರ್ 12ರಂದು  ಅಪರಾಹ್ನ ಕಾಸರಗೋಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಬಸ್ ನಿಲ್ದಾಣದಲ್ಲಿ ಆರೋಪಿಗಳ ಪೈಕಿ ಓರ್ವ  ತನ್ನ ಕೈಯಿಂದ ಮೊಬೈಲ್ ಫೋನ್ ಕಸಿದು ತೆಗೆದು ಅದನ್ನು ಹಿಂತಿರುಗಿ ನೀಡಬೇಕಾದಲ್ಲಿ 500 ರೂ. ನೀಡಬೇಕೆಂದೂ ಇಲ್ಲವಾದಲ್ಲಿ ಫೋನ್ ಎಸೆದು ಗಾನಿಗೊಳಿಸಲಾಗುವುದೆಂದು ಬೆದರಿಕೆಯೊಡ್ಡಿದ್ದ. ಅದರಂತೆ 500 ರೂ. ಪಡೆದಿದ್ದ. ಬಳಿಕ ಇನ್ನೋರ್ವ ನ್ನ ಜೇಬಿನಲ್ಲಿದ್ದ 14,500 ರೂ.ವನ್ನು ಬಲವಂತವಾಗಿ ಕಸಿದು ತೆಗೆದು ಅದನ್ನು ತಡೆಯಲೆತ್ನಿಸಿದ ತನ್ನ ನ್ನು ದೂಡಿಹಾಕಿದ ಬಳಿಕ ಪರಾರಿಯಾದರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.

You cannot copy contents of this page