ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಗಲ್ಫ್‌ಗೆ ಪರಾರಿಗೆ ಯತ್ನಿಸಿದ ಆರೋಪಿ ವಿಮಾನ ನಿಲ್ದಾಣದಲ್ಲಿ ಸೆರೆ
ಪುತ್ತೂರು: ಯುವಮೋರ್ಛಾ ನೇತಾರ ಸುಳ್ಯ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಅವರನ್ನು ಕಡಿದು ಕೊಲೆಗೈದ ಪ್ರಕರಣದಲ್ಲಿ ಇನ್ನೋರ್ವ ಆರೋಪಿಯನ್ನು ಬಂಧಿಸಲಾಗಿದೆ. ಕರ್ನಾಟಕದ ಹಾರಳ್ಳಿ ನಿವಾಸಿ ರಿಯಾಸ್ ಯೂಸಫ್ ಯಾನೆ ರಿಯಾಸ್ ಎಂಬಾತನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಎನ್‌ಐಎ ಬಂಧಿಸಿದೆ. ಗಲ್ಫ್‌ಗೆ ಪರಾರಿಯಾಗಲು ಈತ ವಿಮಾನ ನಿಲ್ದಾಣಕ್ಕೆ ತಲುಪಿದ್ದನು. ಈತನ ಬಂಧನದೊಂದಿಗೆ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಸೆರೆಗೀಡಾದವರ ಸಂಖ್ಯೆ 19ಕ್ಕೇರಿದೆ. ಪ್ರಕರಣದ ಮುಖ್ಯ ಆರೋಪಿಗಳಲ್ಲೋ ರ್ವನಾದ ಮುಸ್ತಫ ಪೈಚಾರು ಎಂಬಾತನಿಗೆ ಸಕಲೇಶಪುರದಲ್ಲಿ ತಲೆಮರೆಸಿಕೊಂಡು ವಾಸಿಸಲು ವ್ಯವಸ್ಥೆ ಏರ್ಪಡಿಸಿಕೊಟ್ಟಿ ರುವು ದಾಗಿ ರಿಯಾಸ್ ಆಗಿದ್ದಾನೆನ್ನ ಲಾಗಿದೆ. ಮುಸ್ತಫ ಪೈಚಾರುನನ್ನು ಮೇ ೧೦ರಂದು ಎನ್‌ಐಎ ಬಂಧಿಸಿತ್ತು. ಈತನನ್ನು ತನಿಖೆ ಗೊಳಪಡಿಸಿದಾಗ ರಿಯಾಸ್‌ನ ಕುರಿತು ಮಾಹಿತಿ ಲಭಿಸಿದೆ. 2022 ಜುಲೈ 26ರಂದು ರಾತ್ರಿ ಪ್ರವೀಣ್ ನೆಟ್ಟಾರು ಅವರನ್ನು ತಂಡವೊಂದು ಕಡಿದು ಕೊಲೆಗೈದಿತ್ತು.