ಪ್ರಾಥಮಿಕ ವರದಿಯಲ್ಲಿ ಆಘಾತಕಾರಿ ಅಂಶ: ಅಹಮ್ಮದಾಬಾದ್ ವಿಮಾನ ಪತನಕ್ಕೆ ಇಂಧನ ಎಂಜಿನ್ ಆಫ್ ಕಾರಣ
ನವದೆಹಲಿ: ಜೂನ್ 12ರಂದು ಅಹಮ್ಮ ದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದ ಬಗ್ಗೆ ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ಪ್ರಾಥಮಿಕ ತನಿಖೆಯಲ್ಲಿ 15 ಪುಟಗಳ ವರದಿ ಬಿಡುಗಡೆ ಮಾಡಿದೆ. ಇಂಧನ ಎಂಜಿನ್ ಆಫ್ ಆಗಿರುವುದು ಪನತಕ್ಕೆ ಕಾರಣಗಳಲ್ಲೊಂದಾಗಿದೆಯೆಂದು ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ.
ಲಂಡನ್ನ ಗ್ವಾಟಿಕ್ ಏರ್ ಇಂಡಿಯಾ ವಿಮಾನ ಎಐ 171 ಆಗಿ ಕಾರ್ಯನಿರ್ವಹಿ ಸುತ್ತಿರುವ ಬೋಯಿಂಗ್ 787-8 ವಿಮಾನ ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ವಿಮಾನದ ಎರಡೂ ಇಂಧನ ಎಂಜಿನ್ಗಳು ಸ್ಥಗಿತಗೊಂಡವು. ಅನಂತರ ವಿಮಾನ ಪತನವಾಗಿದೆ. ವಿಮಾನದ ಎಂಜಿನ್ ಇಂಧನ ಪೂರೈಕೆ ಸ್ಥಗಿತಗೊಂಡಿರುವುದು ಸೇರಿದಂತೆ ಹಲವಾರು ಪ್ರಮುಖ ಕಾರಣಗಳನ್ನು ಎಎಐಬಿ ತನ್ನ ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಿದೆ. ಈ ಪ್ರಾಥಮಿಕ ವರದಿ ಮಾತ್ರವೇ ಆಗಿದೆ. ಪ್ರಸ್ತುತ ಅಪಘಾತದ ತನಿಖೆ ಇನ್ನೂ ಮುಂದುವರಿಯುತ್ತಿ ದೆಯೆಂದೂ ವರದಿಯಲ್ಲಿ ತಿಳಿಸಲಾಗಿದೆ.
ಎಎಐಬಿ ಪ್ರಾಥಮಿಕ ವರದಿ ಪ್ರಕಾರ ವಿಮಾನ ಟೇಕ್ ಆಫ್ಗೊಂಡ ನಂತರ ಎಂಜಿನ್ ಗಳ ಇಂಧನ ಸ್ವಿಚ್ಗಳು ಇದ್ದಕ್ಕಿದ್ದಂತೆಯೇ ರನ್ನಿಂದ ಕಟ್ ಆಫ್ಗೆ ಬದಲಾದವು. ಈ ಘಟನೆಯು ಕೇವಲ ಒಂದು ಸೆಕೆಂಡ್ ಅಂತರ ದಲ್ಲಿ ಸಂಭವಿಸಿದೆ. ಈ ಸಮಯದಲ್ಲಿ ಎಂಜಿನ್ ಗಳಿಗೆ ಇಂಧನ ಹರಿಯುವಿಕೆ ನಿಂತುಹೋಗಿದೆ ಯೆಂದೂ ವರದಿಯಲ್ಲಿ ತಿಳಿಸಲಾಗಿದೆ.
ಅಪಘಾತಕ್ಕೀಡಾದ ವಿಮಾನದ ರಾಕ್ ಪಿಟ್ನಲ್ಲಿ ಅದರ ಪೈಲಟ್ಗಳ ನಡುವೆ ನಡೆದ ಸಂಭಾಷಣೆಯ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿ ಸಲಾಗಿದೆ. ಕಾಕ್ ಪಿಟ್ ವಾಯ್ಸ್ ರೆಕಾರ್ಡರ್ (ಸಿವಿಆರ್) ಪ್ರಕಾರ ಒಬ್ಬ ಪೈಲೆಟ್ ಮತ್ತೊಬ್ಬ ಪೈಲೆಟ್ ಬಳಿ ನೀವು ಎಂಜಿನ್ನ್ನು ಯಾಕೆ ಆಫ್ ಮಾಡಿದ್ದೀರಿ ಎಂದು ಕೇಳಿದ್ದಾರೆ. ಆಗ ಮತ್ತೊಬ್ಬ ಪೈಲೆಟ್ ನಾನೇನೂ ಮಾಡಲಿಲ್ಲ ಎಂದು ಹೇಳಿ ದ್ದಾರೆ. ಇವರಿಬ್ಬರ ಸಂಭಾಷಣೆ ಬಗ್ಗೆ ಗಮನಿಸಿದರೆ ಯಾರೂ ಉದ್ದೇಶಪೂರ್ವಕವಾಗಿ ಇಂಧನದ ಸ್ವಿಚ್ ಆಫ್ ಮಾಡಿಲ್ಲ ಎಂಬುವುದು ಸ್ಪಷ್ಟಗೊ ಳ್ಳುತ್ತಿದೆಯೆಂದೂ ವರದಿಯಲ್ಲ್ಲಿ ತಿಳಿಸಲಾಗಿದೆ. ತುರ್ತು ಪರಿಸ್ಥಿತಿ ಅರಿವಿಗೆ ಬರುತ್ತಿದ್ದಂತೆಯೇ ವಿಮಾನದ ಸ್ವಯಂ ಚಾಲಿತ ವ್ಯವಸ್ಥೆಯನ್ನು ಸಕ್ರಿಯಗೊಳಿಸಲು ಯತ್ನಿಸಲಾಯಿತು. ಅದಾಗ್ಯೂ ರಾಮ್ ಏರ್ ಟರ್ಬೈನ್ (ಆರ್ಟಿಎ) ಅಂದರೆ ತುರ್ತು ಫ್ಯಾನ್ ಮತ್ತು ಎಪಿಯು ನಂತಹ ವ್ಯವಸ್ಥೆ ಗಳನ್ನು ಸಕ್ರಿಯಗೊಳಿಸಿದ ಬಳಿಕವೂ ವಿಮಾನವನ್ನು ಅಪಘಾತದಿಂದ ರಕ್ಷಿಸಲು ಪೈಲೆಟ್ಗಳಿಗೆ ಸಾಧ್ಯವಾಗಲಿಲ್ಲ. ವಿಮಾನದಲ್ಲಿ ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆ ಬಂದಾಗ ಮಾತ್ರ ರಾಮ್ ಏರ್ ಟರ್ಬೈನ್ ಸಕ್ರಿಯವಾಗುತ್ತಿದೆ. ಅಂದರೆ ಇದರರ್ಥ ಎಂಜಿನ್ ಸ್ಥಗಿತಗೊಂಡಿದ್ದು ವಿಮಾನದ ವಿದ್ಯುತ್ ಪೂರೈಕೆಯ ಮೇಲೂ ಪರಿಣಾಮ ಬೀರಿತು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಎರಡೂ ಎಂಜಿನ್ಗಳು ವಿದ್ಯುತ್ ಸರಬರಾಜು ನಿಂತಾಗ ಅಥವಾ ಹೈಡ್ರಾಲಿಕ್ ವೈಫಲ್ಯ ಉಂಟಾದಾಗ ರಾಮ್ ಏರ್ ಟರ್ಬೈನ್ ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುತ್ತಿದೆ. ಇದು ವಿಮಾನದ ಎತ್ತರ ಕಾಯ್ದುಕೊಳ್ಳಲು ಸಹಾಯ ಮಾಡುತ್ತಿದೆ. ಇದು ವಿದ್ಯುತ್ ಉತ್ಪಾದಿಸಲು ಗಾಳಿಯ ವೇಗವನ್ನು ಬಳಸುತ್ತಿದೆ. ಈ ವಿಮಾನ ಜೂನ್ 12ರಂದು ಅಹಮ್ಮದಾಬಾದ್ನಿಂದ ಲಂಡನ್ ಗ್ವಾಟಿಕ್ಗೆ ಹೊರಟ ಸ್ವಲ್ಪ ಸಮಯದ ನಂತರ ಅಹಮ್ಮದಾಬಾದ್ನ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಆವರಣಕ್ಕೆ ಅಪ್ಪಳಿಸಿತ್ತು. ಅದರಲ್ಲಿದ್ದ 241 ಪ್ರಯಾಣಿಕರೂ ಸೇರಿದಂತೆ 275 ಮಂದಿ ಸಾವನ್ನಪ್ಪಿದ್ದರು.