ಸಾಬೀತುಪಡಿಸಲು ಡಿಎನ್‌ಎ ಪರೀಕ್ಷೆಗೆ ಮುಂದಾದ ಎನ್‌ಐಎ
ಕಾಸರಗೋಡು: ತೊಡುಪುಳ ನ್ಯೂಮನ್ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಟಿ.ಜೆ. ಜೋಸೆಫರ ಕೈ ತುಂಡರಿಸಿದ ಪ್ರಕರಣದ ಒಂದನೇ ಆರೋಪಿಯಾಗಿ ರುವ ಎರ್ನಾಕುಳಂ ಜಿಲ್ಲೆಯವನೇ ಆಗಿರುವ ಸವಾದ್‌ನ ಡಿಎನ್‌ಎ ಪರೀಕ್ಷೆ ನಡೆಸುವಂತೆ ಕೋರಿ ಈ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಎರ್ನಾಕುಳಂ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ತೀರ್ಮಾನಿಸಿದೆ.
ಪ್ರಾಧ್ಯಾಪಕನ ಕೈ ತಂಡರಿಸಿದ ಬಳಿಕ ಕಣ್ಣೂರು ಮಟ್ಟನ್ನೂರಿನಲ್ಲಿ ತಲೆಮರೆಸಿಕೊಂಡು ಜೀವಿಸುತ್ತಿದ್ದ ಸವಾದನ್‌ನನ್ನು ಘಟನೆ ನಡೆದ ೧೩ ವರ್ಷಗಳ ಬಳಿಕ ಅಲ್ಲಿಂದ ಎನ್‌ಐಎ ಬಂಧಿಸಿತ್ತು. ಆತ ನ್ಯಾಯಾಂಗ ಈಗ ಬಂಧ ನದಲ್ಲಿ ಕಳೆಯುತ್ತಿದ್ದಾನೆ. ಸವಾದ್ ತನ್ನ ಹೆಸರು ಬದಲಾಯಿಸಿಕೊಂಡು ಶಾಜ ಹಾನ್ ಎಂಬ ಹೆಸರಲ್ಲಿ ಮಟ್ಟನ್ನೂರಿನಲ್ಲಿ ವಾಸಿಸುತ್ತಿದ್ದನು. ಮಾತ್ರವಲ್ಲ ಆತ ಮಂಜೇಶ್ವರದಿಂದ ಯುವತಿ ಯೋರ್ವೆಯನ್ನು ಮದುವೆಯಾಗಿದ್ದು, ಆ ದಾಂಪತ್ಯದಿಂದ ಆತನಿಗೆ ಇಬ್ಬರು ಮಕ್ಕಳಿದ್ದಾರೆ. ಶಾಜಹಾನ್ ಎಂಬ ಹೆಸರಲ್ಲಿ ಆತ ಮಂಜೇಶ್ವರದ ಯುವತಿಯನ್ನು ಮದುವೆಯಾಗಿ ದ್ದನು. ಆದ್ದರಿಂದ ಬಂಧಿತ ಶಾಜಹಾನ್ ನಿಜವಾಗಿಯೂ ಸವಾದ್ ಆಗಿದ್ದಾನೆಂಬುವುದನ್ನು ವೈಜ್ಞಾನಿಕವಾಗಿ ಸಾಬೀತುಪಡಿಸುವ ಆಗತ್ಯವಿದೆ. ಅದು ಎನ್‌ಐಎಯ ಹೊಣೆಗಾರಿಕೆಯೂ ಆಗಿದೆ. ಆದ್ದರಿಂದ ಅದನ್ನು ಸಾಬೀತುಪಡಿಸಲು ಸವಾದ್‌ನನ್ನು ಡಿಎನ್‌ಎ ಪರೀಕ್ಷೆ ಗೊಳಪಡಿಸಬೇಕಾಗಿರುವುದು ಅತೀ ಅಗತ್ಯವಾಗಿದೆ. ಅದಕ್ಕಾಗಿ ಅನುಮತಿ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾ ಗುವುದಲ್ಲದೆ ಅದಕ್ಕಾಗಿ ನ್ಯಾಯಾಂಗ ಬಂಧನದಿಂದ ಮತ್ತೆ ತನ್ನ ಕಸ್ಟಡಿಗೆ ತೆಗೆದುಕೊಳ್ಳಲಾಗುವುದೆಂದು ತನಿಖಾ ತಂಡ ಹೇಳಿದೆ. ೨೦೧೦ ಜುಲೈ ೪ರಂದು ಪ್ರೊ. ಟಿ.ಜೆ. ಜೋಸೆಫರ ಕೈ ಕಡಿದು ತುಂಡರಿಸಿದ ಘಟನೆ ನಡೆದಿತ್ತು. ಕಾಲೇಜಿನ ಪ್ರಶ್ನೆಪತ್ರದಲ್ಲಿ ಮತೀಯ ನಿಂದನೆ ನಡೆಸಲಾಗಿದೆಯೆಂದು ಆರೋಪಿಸಿ ಅಕ್ರಮಿಗಳ ತಂಡ ಅವರ ಕೈ ಕಡಿದು ತುಂಡರಿಸಿತ್ತು. ಈ ಪ್ರಕರಣದ ಆರೋಪಿಗಳೆಲ್ಲರೂ ಪೋಪುಲರ್ ಫ್ರಂಟ್ ಕಾರ್ಯಕರ್ತ ರಾಗಿದ್ದಾರೆ. ಘಟನೆ ನಡೆದಿ ಬಳಿಕ ಆರೋಪಿ ಸವಾದ್‌ನನ್ನು ತಲೆಮರೆಸಿ ಕೊಳ್ಳಲು ಹಲವರು ಆತನಿಗೆ ಸಹಾಯ ಮಾಡಿದ್ದಾರೆಂಬ ಮಾಹಿತಿಯೂ ಎನ್‌ಐಎಗೆ ಲಭಿಸಿದೆ. ಆದ್ದರಿಂದ ಆ ಬಗ್ಗೆಯೂ ವಿಚಾರಣೆ ಇನ್ನೊಂದೆಡೆ ನಡೆಯುತ್ತಿದೆ. ಅದಕ್ಕೆ ಸಂಬಂಧಿಸಿ ಇನ್ನೂ ಕೆಲವರು ಬಂಧನಕ್ಕೊಳಗಾಗುವ ಸಾಧ್ಯತೆಯೂ ಇದೆ.