ಪ್ರೊ. ಪಿ.ಕೆ. ಶೇಷಾದ್ರಿ ಸಂಸ್ಮರಣೆ 14ರಂದು

ಕಾಸರಗೋಡು:  ಕಾಸರಗೋಡು ಸರಕಾರಿ ಕಾಲೇಜಿನ ಹಿರಿಯ ಉಪನ್ಯಾಸಕರಾಗಿದ್ದ ಪ್ರೊ. ಪಿ.ಕೆ. ಶೇಷಾದ್ರಿಯವರ ಶಿಷ್ಯರು ಅವರ ೧೬ನೇ ಪುಣ್ಯಸ್ಮರಣೆ ದಿನವಾದ ಈ ತಿಂಗಳ 14ರಂದು ಸಂಜೆ ನಗರಸಭಾ ಪುರಭವನದಲ್ಲಿ ಸಂಸ್ಮರಣೆ ನಡೆಸುವರು. ಇದೇ ವೇಳೆ ಸಾಕ್ಷ್ಯಚಿತ್ರ ಪ್ರದರ್ಶನ, ನಾಟಕ ಪ್ರದರ್ಶನ, ಗಾನಮೇಳ ನಡೆಯಲಿದೆ. ಶೇಷಾದ್ರಿಯವರ ಸಹೋದ್ಯೋಗಿ ಪ್ರೊ. ಸಿ. ತಾರಾನಾಥ್ ಸಂಸ್ಮರಣೆ ಭಾಷಣ ಮಾಡುವರು. ಜನಪ್ರತಿನಿಧಿಗಳು, ಮಾಧ್ಯಮ ಪ್ರತಿನಿಧಿ  ವೆಂಕಟೇಶ ರಾಮಕೃಷ್ಣನ್, ಸಿನಿಮಾ ನಟ ಅಲಿಯಾರ್, ಡಾ. ಅಂಬಿಕಾಸುತನ್ ಮಾಂಙಾಡ್, ರತ್ನಾಕರನ್ ಮಾಂಙಾಡ್ ಸಹಿತ ಹಲವ ಗಣ್ಯರು ಭಾಗವಹಿಸುವರು.

RELATED NEWS

You cannot copy contents of this page