ಹೊಸದುರ್ಗ: ಪ್ಲಸ್‌ಟು ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಅಪಹರಿಸಲು ಯತ್ನ ನಡೆದಿದ್ದು, ಘಟನೆ ಗಮನಕ್ಕೆ ಬಂದ ನಾಗರಿಕರು ದುಷ್ಕರ್ಮಿಗಳನ್ನು ಬೆನ್ನಟ್ಟಿ ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಇದೇ ವೇಳೆ ಯುವಕರನ್ನು ಸೆರೆಹಿಡಿದಿರುವುದನ್ನು ತಿಳಿದು ತಲುಪಿದ ಜನಪ್ರತಿನಿಧಿಯ ನೇತೃತ್ವದ ತಂಡ ಹಲ್ಲೆ ನಡೆಸಿರುವುದಾಗಿ ಆರೋಪವುಂಟಾಗಿದೆ. ಹಲ್ಲೆಯಿಂದ ಗಾಯಗೊಂಡ ಇಬ್ಬರು ನೀಲೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಬಾಲಕಿಯನ್ನು ಮೂವರ ತಂಡ ಕಾರಿನಲ್ಲಿ ಅಪಹರಿಸಿದೆ. ವಿಷಯ ತಿಳಿದು ತಲುಪಿದ ನಾಗರಿಕರು ಚಿರಪುರಂ ನಿವಾಸಿಗಳಾದ ಮೂವರನ್ನು ಓರ್ಚಾ ಎಂಬಲ್ಲಿ ಕಾರಿಗೆ ತಡೆಯೊಡ್ಡಿ ಸೆರೆಹಿಡಿದಿದ್ದಾರೆ. ಬಳಿಕ ಯುವಕರಿಗೆ ತಕ್ಕ ಶಾಸ್ತಿ ಮಾಡಲಾಯಿತು. ಈ ವಿಷಯ ತಿಳಿದು ತಲುಪಿದ ಯುವಕರ ಪೋಷಕರಿಗೂ ಹಲ್ಲೆಗೈದಿರುವುದಾಗಿ ಹೇಳಲಾಗುತ್ತಿದೆ. ಘಟನೆ ಬಗ್ಗೆ ತಿಳಿದು ನೀಲೇಶ್ವರ ಎಸ್‌ಐ ಮದುಸೂಧನನ್ ಮಡಿಕೈ ಅವರ ನೇತೃತ್ವದ ಪೊಲೀಸರು ತಲುಪಿ ಯುವಕರು ಮತ್ತಿತರರನ್ನು ಠಾಣೆಗೆ ಕೊಂಡೊಯ್ದಿದ್ದಾರೆ.







