ಪ್ಲಸ್‌ಟು ಸೇ ಪರೀಕ್ಷೆಯಲ್ಲಿ ಅಂಕ ಕಡಿಮೆಯಾದ ವ್ಯಥೆ: ವಿದ್ಯಾರ್ಥಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಪ್ಲಸ್‌ಟು ಸೇ ಪರೀಕ್ಷೆಯಲ್ಲಿ ಅಂಕ ಕಡಿಮೆಯಾ ದುದರಿಂದ ವ್ಯಥೆಯಲ್ಲಿದ್ದ ವಿದ್ಯಾ ರ್ಥಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ವೆಳ್ಳರಿಕುಂಡ್ ಸೈಂಟ್ ಜೂಡ್ಸ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಯಾಗಿದ್ದ ಚೆಂಬನ್ ಕುನ್ನುವಿನ ಕಿಳಕ್ಕೇಕುಟ್ಟ್ (ಮೀಂಬುಳೈಕಲ್) ಬಿನು ಥೋಮಸ್-ಶಿಲ್ಪಾ ದಂಪತಿಯ ಪುತ್ರ ಕ್ರಿಸ್ಟೋ ಥೋಮಸ್ (18) ಮೃತಪಟ್ಟ ವ್ಯಕ್ತಿ. ನಿನ್ನೆ ಮಧ್ಯಾಹ್ನ 2ಗಂಟೆಗೆ ವೇಳೆ ಮನೆ ಸಮೀಪ ದಲ್ಲಿ ರುವ ಜನವಾಸವಿಲ್ಲದ ಮನೆಯ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಈತ ಪತ್ತೆ ಯಾಗಿದ್ದನು. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾ ಗಲಿಲ್ಲ.
ಕಳೆದ ಮಾರ್ಚ್‌ನಲ್ಲಿ ನಡೆದ ಪರೀಕ್ಷೆಯಲ್ಲಿ ಅನುತ್ತೀರ್ಣನಾದ ಕ್ರಿಸ್ಟೋ ಥೋಮಸ್ ಬಳಿಕ ಸೇ ಪರೀಕ್ಷೆ ಬರೆದಿದ್ದನು. ನರ್ಸಿಂಗ್ ಶಿಕ್ಷಣ ಕೇಂದ್ರದಲ್ಲಿ ಪ್ರವೇ ಶಾತಿಯೂ ಲಭಿಸಿತ್ತು. ಆದರೆ ಸೇ ಪರೀಕ್ಷೆ ಫಲಿತಾಂಶ ಬಂದಾಗ ಆತನಿಗೆ ಅಂಕ ಕಡಿಮೆಯಾ ಗಿತ್ತೆನ್ನಲಾಗಿದೆ. ಇದರಿಂದ ಮನನೊಂದು ನೇಣುಬಿಗಿದು ಸಾವಿಗೀಡಾಗಿರಬಹುದೆಂದು ಅಂದಾಜಿಸಲಾಗಿದೆ.
ಮೃತನು ಸಹೋದರರಾದ ಕೆವಿನ್, ಎಡ್ವಿನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.