ಪ್ಲಸ್‌ವನ್ ತರಗತಿ ಆರಂಭ

ಕಾಸರಗೋಡು: ರಾಜ್ಯದ ಹೈಯರ್ ಸೆಕೆಂಡರಿ ಪ್ರಥಮ ವರ್ಷದ ತರಗತಿಗಳು ಇಂದು ಆರಂಭಗೊಂ ಡಿವೆ. ಮೊದಲ ಹಂತದಲ್ಲಿ ಸರಕಾರಿ ಎಯ್ಡೆಡ್ ಮತ್ತು ಅನ್ ಎಯ್ಡೆಡ್ ವಲಯಗಳ ಶಾಲೆಗಳಲ್ಲಾಗಿ ಒಟ್ಟು 3,22,147 ಮಂದಿ ವಿದ್ಯಾರ್ಥಿಗಳು ಪ್ಲಸ್‌ವನ್‌ಗೆ ಪ್ರವೇಶ ಪಡೆದಿದ್ದಾರೆ. ಇನ್ನು ಉತ್ತರ ಕೇರಳದ ಶಾಲೆಗಳಲ್ಲಿ ಪ್ಲಸ್‌ವನ್ ಸೀಟುಗಳ ಕೊರತೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಆ ಬಗ್ಗೆ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ನಾಳೆ ಸೆಕ್ರೆಟರಿಯೇಟ್‌ನ ಅನೆಕ್ಸ್‌ನಲ್ಲಿ ವಿದ್ಯಾರ್ಥಿ ಸಂಘಟನೆಗಳು, ಸಂಬಂಧಪಟ್ಟವರು ಮತ್ತು ಇತರರೊಂದಿಗೆ ಚರ್ಚೆ ನಡೆಸುವರು.

You cannot copy contents of this page