ಪ್ಲಾಸ್ಟಿಕ್ ತ್ಯಾಜ್ಯ ಉಪೇಕ್ಷೆ : ವಿವಿಧ ಸಂಸ್ಥೆಗಳಿಂದ ದಂಡ ವಸೂಲಿ

ಮಂಜೇಶ್ವರ: ಪಂಚಾಯತ್‌ನ ಗೇರುಕಟ್ಟೆ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನ ಮಾಲಕನಿಗೆ  ಎನ್‌ಫೋರ್ಸ್‌ಮೆಂಟ್ ತಂಡ ದಂಡ ವಿಧಿಸಿದೆ.  ಇದೇ ಪರಿಸರದ ಕ್ವಾರ್ಟರ್ಸ್ ಮಾಲಕನಿಗೂ ದಂಡ ಹೇರಲಾಗಿದ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ರಾಶಿ ಹಾಕಿರುವುದು, ಕಿಚ್ಚಿರಿಸಿರು ವುದರ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗೂ ದಂಡ ಹೇರಲಾಗಿದೆ. ಅಪಾರ್ಟ್‌ಮೆಂಟ್‌ಗೆ 10,000, ಕ್ವಾರ್ಟರ್ಸ್‌ಗೆ ಹಾಗೂ ಶಾಲೆಗೆ 5,೦೦೦ ರೂ.ನಂತೆ ದಂಡ ಹೇರಲಾಗಿದೆ. ಪ್ಲಾಸ್ಟಿಕ್ ಸಹಿತದ ತ್ಯಾಜ್ಯವನ್ನು ನಿರ್ಲಕ್ಷ್ಯವಾಗಿ ಎಸೆದ ಹಿನ್ನೆಲೆಯಲ್ಲಿ  ಮಂಜೇಶ್ವರದ ಸೂಪರ್ ಮಾರ್ಕೆಟ್‌ಗೂ 5,೦೦೦ ರೂ. ದಂಡ ವಿಧಿಸಲಾಗಿದೆ. ಅಲ್ಲದೆ ಕೆಲವು ಸಂಸ್ಥೆಗಳಿಂದ ಪಂಚಾಯತ್ ರಾಜ್ ಆಕ್ಟ್ ಪ್ರಕಾರ ದಂಡ ವಸೂಲಿ ಮಾಡಲಾಗಿದೆ. ದಾಳಿ ನಡೆಸಿದ ತಂಡದಲ್ಲಿ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ತಂಡದ ನಾಯಕ ಕೆ.ವಿ. ಮುಹಮ್ಮದ್ ಮದನಿ, ಪಂಚಾಯತ್ ಅಸಿಸ್ಟೆಂಟ್ ಕಾರ್ಯದರ್ಶಿ ಪ್ರವೀಣ್ ರಾಜ್, ಸದಸ್ಯ ಫಾಸಿಲ್ ಇ.ಕೆ. ಭಾಗವಹಿಸಿದರು.

You cannot copy contents of this page