ಫಿಟ್ನೆಸ್ ಇಲ್ಲದ ಶಾಲಾ ಬಸ್‌ಗಳ ಸಂಚಾರಕ್ಕೆ ಎಂ.ವಿ.ಡಿ ತಡೆ
ತಿರುವನಂತಪುರ: ಫಿಟ್ನೆಸ್ ಇಲ್ಲದ ಶಾಲಾ ಬಸ್‌ಗಳಲ್ಲಿ ಮಕ್ಕಳನ್ನು ಸಾಗಿ ಸುತ್ತಿಲ್ಲವೆಂದು ಖಚಿತಪಡಿಸ ಬೇಕೆಂದು ಆರ್.ಟಿ.ಒಗಳಿಗೆ ಟ್ರಾನ್ಸ್‌ಪೋರ್ಟ್ ಕಮಿಶನರ್ ನಿರ್ದೇಶ ನೀಡಿದ್ದಾರೆ.
ಮೋಟಾರು ವಾಹನ ಇಲಾಖೆ ಯ ತಪಾಸಣೆಯಲ್ಲಿ 3,400 ಶಾಲಾ ಬಸ್‌ಗಳಿಗೆ ಫಿಟ್ನೆಸ್ ಇಲ್ಲವೆಂದು ತಿಳಿದುಬಂದಿದೆ. ಸಂಚಾರ ನಡೆಸುವ ಶಾಲಾ ಬಸ್‌ಗಳಿಗೆ ಫಿಟ್ನೆಸ್ ಇದೆಯೇ ಎಂದು ಅಧಿಕಾರಿಗಳು ತಪಾಸಣೆ ನಡೆಸಬೇಕು. ಗುತ್ತಿಗೆ ಪಡೆಯುವ ವಾಹನಗಳ ಫಿಟ್ನೆಸ್ ಕೂಡಾ ಖಚಿತಪಡಿಸಬೇಕಾಗಿದೆ. ಮೋಟಾರು ವಾಹನ ಇಲಾಖೆಯ ವಿದ್ಯಾವಾಹನ್ ಆಪ್ ಎಲ್ಲಾ ಶಾಲಾ ಬಸ್‌ಗಳಲ್ಲಿ ಏರ್ಪಡಿಸಬೇಕು. ಈ ವಿಷಯವನ್ನು ಶಾಲಾ ಅಧಿಕಾರಿಗಳಿಗೆ ಲಿಖಿತವಾಗಿ ತಿಳಿಸಬೇಕಾಗಿದೆ. ಆಪ್ ಎಲ್ಲಾ ಶಾಲಾ ಬಸ್‌ಗಳಲ್ಲೂ ಏರ್ಪಡಿಸ ಬೇಕು. ಈ ವಿಷಯವನ್ನು ಶಾಲಾ ಅಧಿಕಾರಿಗಳಿಗೆ ಲಿಖಿತವಾಗಿ ತಿಳಿಸಬೇಕಾಗಿದೆ. ಆಪ್ ಇನ್‌ಸ್ಟಾಲ್ ಮಾಡಿ ನೋಂದಾಯಿ ಸಲು ಆಯಾ ಶಾಲಾ ಅಧಿಕಾರಿಗಳನ್ನು ಸಂಪರ್ಕಿಸ ಬೇಕೆಂದು ರಕ್ಷಕರೊಂದಿಗೂ ಎಂ.ವಿ.ಡಿ ತಿಳಿಸಿದೆ. ಸಂಶಯಗಳಿದ್ದರೆ ಟೋಲ್ ಫ್ರೀ ನಂಬ್ರವಾದ 18005997099 ನಂಬ್ರದಲ್ಲಿ ಕರೆ ಮಾಡಬೇಕಾಗಿದೆಯೆಂದೂ ತಿಳಿಸಲಾಗಿದೆ.