ಫುಟ್ಬಾಲ್ ಪಂದ್ಯ ಮಧ್ಯೆ ಘರ್ಷಣೆ: 100ಕ್ಕೂ ಹೆಚ್ಚು ಮಂದಿ ಸಾವು
ಗಿನಿ: ಪಶ್ಚಿಮ ಆಫ್ರಿಕಾ ದೇಶವಾದ ಗಿನಿಯ ಎನ್ಸೆರೆಕೋರ ನಗರದಲ್ಲಿ ಫುಟ್ಬಾಲ್ ಪಂದ್ಯಾಟ ಮಧ್ಯೆ ಕ್ರೀಡಾಭಿಮಾನಿಗಳ ಮಧ್ಯೆ ಉಂಟಾದ ಘರ್ಷಣೆಯಲ್ಲಿ 100ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿ ದ್ದಾರೆಂದು ವರದಿಯಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆಯೆಂದು ತಿಳಿಸಲಾಗಿದೆ. ಅಧ್ಯಕ್ಷ ಮಾಮಾದಿ ದೌಂಬೆ ಅವರನ್ನು ಗೌರ ವಿಸುವುದಕ್ಕಾಗಿ ಏರ್ಪಡಿಸಿದ ಸ್ಪರ್ಧೆ ವೇಳೆ ಈ ಅಹಿತಕರ ಘಟನೆ ನಡೆದಿದೆ. ಪಂದ್ಯಾಟ ವೇಳೆ ರೆಫರಿಯ ನಿರ್ಧಾರ ವನ್ನು ಪ್ರತಿಭಟಿಸಿ ತಂಡವೊಂದು ಮೈದಾನಕ್ಕಿಳಿದು ಘರ್ಷಣೆಯಲ್ಲಿ ತೊಡ ಗಿದೆ. ಇದು ಬಳಿಕ ತೀವ್ರಗೊಂಡಿತು.
ಎರಡೂ ತಂಡಗಳ ಅಭಿಮಾನಿಗಳು ಕ್ರೀಡಾಂಗಣದಲ್ಲಿ ತೀವ್ರ ಹೊಕೈ ನಡೆಸಿದ್ದಾರೆ. ಅನಂತರ ಅದು ನಗರದ ಇತರ ಪ್ರದೇಶಗಳಿಗೂ ವಿಸ್ತರಿಸಿದೆ ಎಂದು ಹೇಳಲಾಗುತ್ತಿದೆ.