ಫ್ಯಾಶನ್ ಗೋಲ್ಡ್ ಠೇವಣಿ ವಂಚನೆ : ಎಲ್ಲಾ ಪ್ರಕರಣಗಳಲ್ಲೂ ಆರೋಪ ಪಟ್ಟಿ ಸಲ್ಲಿಸಲು ಅನುಮತಿ
ಕಾಸರಗೋಡು: ಮುಸ್ಲಿಂ ಲೀಗ್ ನೇತಾರನೂ, ಮಂಜೇಶ್ವರದ ಮಾಜಿ ಶಾಸಕನಾದ ಎಂ.ಸಿ. ಖಮರುದ್ದೀನ್, ಮುಸ್ಲಿಂ ಲೀಗ್ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯನಾಗಿದ್ದ ಪೂಕೋಯ ತಂಙಳ್ ಎಂಬಿವರು ಆರೋಪಿಗಳಾದ ಫ್ಯಾಶನ್ ಗೋಲ್ಡ್ ಠೇವಣಿ ವಂಚನೆ ಸರಣಿಯಲ್ಲಿ ಮೊದಲು ದಾಖಲಿಸಿದ ಎಲ್ಲಾ ಪ್ರಕರಣಗಳಲ್ಲೂ ಆರೋಪ ಪಟ್ಟಿ ಸಲ್ಲಿಸಲು ಅನುಮತಿ ಲಭಿಸಿದೆ. ವಿಜಿಲೆನ್ಸ್ ಡೈರೆಕ್ಟರ್ ಈ ಬಗ್ಗೆ ಕಣ್ಣೂರು ಕ್ರೈಂ ಬ್ರಾಂಚ್ ಎಸ್ಪಿಗೆ ಅನುಮತಿ ನೀಡಿದ್ದಾರೆ. ಠೇವಣಿ ವಂಚನೆಗೆ ಸಂಬAಧಿಸಿ 168 ಕೇಸುಗಳನ್ನು ಮೊದಲು ದಾಖಲಿಸಲಾಗಿತ್ತು. ಈ ಪೈಕಿ 39 ಪ್ರಕರಣಗಳಲ್ಲಿ ಈ ಹಿಂದೆ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಉಳಿದ ಪ್ರಕರಣಗಳಲ್ಲಿ ಮೇ 31ರ ಮುಂಚಿತ ಆರೋಪಪಟ್ಟಿ ಸಲ್ಲಿಸಲು ಕ್ರೈಂಬ್ರಾAಚ್ ಆಲೋಚಿಸುತ್ತಿದೆ. ಕಾಸರಗೋಡು, ಕಣ್ಣೂರು ಕ್ರೈಂಬ್ರಾAಚ್ ಕಚೇರಿಗಳಲ್ಲಿ ಆರೋಪಪಟ್ಟಿ ಸಲ್ಲಿಸಲಿರುವ ಕ್ರಮ ತ್ವರಿತವಾಗಿ ನಡೆಯುತ್ತಿದೆ.
ಇದೇ ವೇಳೆ ಠೇವಣಿ ವಂಚನೆಗೆ ಸಂಬAಧಿಸಿ ಇತ್ತೀಚೆಗೆ ದಾಖಲಿಸಿದ ಪ್ರಕರಣಗಳಲ್ಲಿ ತನಿಖೆ ಮುಂದುವರಿ ಸಲು ನಿರ್ದೇಶ ನೀಡಲಾಗಿದೆ.