ಬಂಗಾಳಕೊಲ್ಲಿಯಲ್ಲಿ ಹೊಸ ವಾಯುಭಾರ ಕುಸಿತ: ರಾಜ್ಯದಲ್ಲಿ ಜಡಿ ಮಳೆ ಸಾಧ್ಯತೆ ಎಲ್ಲೆಡೆ ಜಾಗ್ರತಾ ನಿರ್ದೇಶ

ತಿರುವನಂತಪುರ: ಮುಂಗಾರು ಮಳೆಯ ಅಬ್ಬರ ಅಲ್ಪ ಶಮನಗೊಂಡಿ ದ್ದರೂ ಇನ್ನೊಂದೆಡೆ ಬಂಗಾಳಕೊಲ್ಲಿ ಯಲ್ಲಿ ಮತ್ತೆ ಹೊಸ ವಾಯುಭಾರ ಪ್ರಕ್ರಿಯೆ ರೂಪುಗೊಳ್ಳತೊಡಗಿದೆ. ಇದ ರಿಂದಾಗಿ ಕೇರಳದಲ್ಲಿ ಮುಂದಿನ ದಿನಗ ಳಲ್ಲಿ ಜಡಿ ಮಳೆ ಸುರಿಯುವ ಸಾಧ್ಯತೆ ಇದೆಯೆಂದು ಕೇಂದ್ರ ಹವಾಮಾನ ಇಲಾಖೆ ಹೊಸ ನಿರ್ದೇಶ ನೀಡಿದೆ.  ಈ ನಿರ್ದೇಶದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂ ತ ಜಾಗ್ರತಾ ನಿರ್ದೇಶ ನೀಡಲಾಗಿದೆ.

ಮಳೆಯಿಂದ ಸೃಷ್ಟಿಯಾಗಿರುವ ಪ್ರಾಕೃತಿಕ ವಿಕೋಪಕ್ಕೆ ರಾಜ್ಯದಲ್ಲಿ ನಿನ್ನೆ ಇಬ್ಬರು ಸಾವನ್ನಪ್ಪಿದ್ದಾರೆ. ತೃಶೂರಿನ ನಡತ್ತಲದಲ್ಲಿ ನೀರು ತುಂಬಿದ ತೋಡಿಗೆ ಬಿದ್ದು ೧೦ ವರ್ಷದ ಬಾಲಕ ಸಾವ ನ್ನಪ್ಪಿದ್ದಾನೆ. ಇನ್ನೊಂದೆಡೆ ಪಾಲ್ಘಾಟ್ ತೆಂಙಾರುಶಿ ಎಂಬಲ್ಲಿ ಸ್ನೇಹಿತರೊಂದಿಗೆ ತೋಡಿನಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿಯೋರ್ವ ಲನೀರಿಗೆ ಬಿದ್ದು ಅಲ್ಲೇ ಸಾವನ್ನಪ್ಪಿದ ಘಟನೆಯೂ ನಡೆದಿದೆ. ಮಲಪ್ಪುರಂ ಜಿಲ್ಲೆಯ ವಂಡೂರು,ಪುಳಿಯಕ್ಕೋಡಿನಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್ಸಿನ ಮೇಲೆ ಬೃಹತ್ ಆಲದ ಮರ ಬಿದ್ದು ನಾಲ್ವರು  ಪ್ರಯಾಣಿಕರು ಗಾಯಗೊಂ ಡಿದ್ದಾರೆ. ಇದರಲ್ಲಿ ಓರ್ವರ ಸ್ಥಿತಿ ಅತೀ ಗಂಭೀರವಾಗಿದೆ. ಕಾಸರಗೋಡು, ಕಣ್ಣೂರು, ಪತ್ತನಂತಿಟ್ಟ, ಕೋಟ್ಟಯಂ, ಎರ್ನಾಕುಳಂ, ಇಡುಕ್ಕಿ, ತೃಶೂರು, ಪಾಲಕ್ಕಾಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನು ಕಲ್ಲಿಕೋಟೆ ಮತ್ತು ವಯನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಸಮುದ್ರದಲ್ಲಿ ಮುಂದಿನ ನಾಲ್ಕೈದು ದಿನಗಳಲ್ಲಿ  ಆಳೆತ್ತರದ ಅಲೆಗಳು ಎದ್ದೇಳುವ ಸಾಧ್ಯತೆ ಇದೆ. ಆದ್ದರಿಂದ ಮೀನುಗಾರರು ಹಾಗೂ ಸಮುದ್ರ ತೀರ ಪ್ರದೇಶ ನಿವಾಸಿಗಳಿಗೆ ಹೆಚ್ಚಿನ ಜಾಗ್ರತಾ ನಿರ್ದೇಶ ನೀಡಲಾಗಿದೆ.

ಕಳೆದ ನಾಲ್ಕು ದಿನಗಳಲ್ಲಿ ಮಾತ್ರ ವಾಗಿ ಜಿಲ್ಲೆಯಲ್ಲಿ 429.1 ಮಿಲ್ಲಿ ಮೀಟರ್ ಮಳೆ ಲಭಿಸಿದೆ. ಈ ಅವಧಿಯಲ್ಲಿ ಸಾಧಾರಣವಾಗಿ ವಾಡಿಕೆ ಪ್ರಕಾರ 205.2 ಮಿಲ್ಲಿ ಮೀಟರ್ ಲಭಿಸುತ್ತಿದೆ. ಅಂದರೆ ಶೇ. 109 ಎಂ.ಎಂ ಮಳ ಈ ಅವಧಿ ಯಲ್ಲಿ ಹೆಚ್ಚು ಲಭಿಸಿದೆ. ಮಳೆಯಿಂದ ಜಿಲ್ಲೆಯ ನದಿಗಳಲ್ಲಿ ನೀರಿನ ಮಟ್ಟವೂ ಹೆಚ್ಚಾಗತೊಡಗಿದ್ದು, ನದಿ ದಡಗಳ ನಿವಾಸಿಗಳಿಗೂ ಜಾಗ್ರತಾ ನಿರ್ದೇಶ ನೀಡಲಾಗಿದೆ.

RELATED NEWS

You cannot copy contents of this page