ಬಂಗ್ರಮಂಜೇಶ್ವರ ಕ್ಷೇತ್ರದಲ್ಲಿ ವರ್ಷಾವಧಿ ಪ್ರತಿಷ್ಠಾ ಮಹೋತ್ಸವ ಸಮಾಪ್ತಿ

ಮಂಜೇಶ್ವರ: ಬಂಗ್ರಮಂಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ದೇವಸ್ಥಾನ ದಲ್ಲಿ ವರ್ಷಾವಧಿ ಪ್ರತಿಷ್ಠಾ ಮಹೋ ತ್ಸವ ಬ್ರಹ್ಮಶ್ರೀ ವೇದಮೂರ್ತಿ ಕೆ. ಉಮೇಶ ತಂತ್ರಿ ಮಂಗಳೂರು, ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ  ಬ್ರಹ್ಮಶ್ರೀ ಪ್ರಕಾಶ್ಚಂದ್ರ ಶ್ರೌತಿಯವರ ಪೌರೋಹಿತ್ಯ ದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಕಾರ್ಯಕ್ರಮ ಇಂದು ಸಮಾಪ್ತಿ ಗೊಂಡಿತು. ದೇವತಾಪ್ರಾರ್ಥನೆ, ತೋರಣ ಪ್ರತಿಷ್ಠೆ, ತಂತ್ರಿವರಣ ಸಹಿತ ವಿವಿಧ ವೈದಿಕ ಕಾರ್ಯಕ್ರಮ, ಶ್ರೀ ಮಾತೆಗೆ ಪಂಚಾಮೃತ ಸಹಿತ ೧೦೮ ಸೀಯಾಳ ಅಭಿಷೇಕ, ಕಲಾತತ್ವ ಪ್ರದಾನ ಹೋಮಾದಿಗಳು, ಪೂರ್ಣಾಹುತಿ, ಕುಂಭಾಭಿಷೇಕ, ಅಲಂಕಾರ, ಮಹಾಪೂಜೆ, ಪಲ್ಲಪೂಜೆ, ಶ್ರೀ ದೇವರ ಮಹಾಪೂಜೆ, ಅನ್ನಸಂತರ್ಪಣೆ, ಕೆ.ಎಂ. ಗುರುಕಿರಣ್ ಆಚಾರ್ಯ ಕೆರೆಮನೆ ಕಾಸರಗೋಡು ಇವರಿಂದ ವೇಣುವಾದನ, ಮಡಿಕೇರಿ ಕೇಶವ ಆಚಾರ್ಯ ಇವರಿಂದ ಕೊಳಲು ವಾದನ, ಸಂಗೀತ ಕಾರ್ಯಕ್ರಮ, ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿಯವ ರಿಗೆ ಪೂರ್ಣಕುಂಭ ಸ್ವಾಗತ, ಆಶೀರ್ವ ಚನ, ರಂಗಪೂಜೆ, ಗುಳಿಗ ದೈವಕ್ಕೆ ತಂಬಿಲ, ಪಲ್ಲಕ್ಕಿ ಉತವ, ಶ್ರೀ ಆದಿಕ್ಷೇತ್ರಕ್ಕೆ ಭೇಟಿ, ಅಷ್ಟಾವಧಾನ, ಅವಭೃತ (ಓಕುಳಿ), ಶ್ರೀ ದೇವರ ಆಲಯ ಪ್ರವೇಶ ಬ್ರಹ್ಮಾರ್ಪಣೆ, ಫಲಮಂತ್ರಾಕ್ಷತೆ, ಸಂಪ್ರೋಕ್ಷಣೆಯೊಂ ದಿಗೆ ಇಂದು ಉತ್ಸವಸಮಾಪ್ತಿಗೊಂಡಿತು. ಉತ್ಸವದ ದಿನಗಳಲ್ಲಿ ಓಜ ಸಾಹಿತ್ಯ ಕೂಟ ಹಾಗೂ ಶ್ರೀ ಕಾಳಿಕಾಪರಮೇಶ್ವರೀ ವಿಶ್ವಕರ್ಮ ಮಹಿಳಾ ಸಂಘದ ವತಿಯಿಂದ ಭಜನಾ ಕಾರ್ಯಕ್ರಮ ಹಾಗೂ ದೇವೀ ಪಾರಾಯಣ ನಡೆಯಿತು.

RELATED NEWS

You cannot copy contents of this page