ಬದಿಯಡ್ಕ ಮರ್ಚೆಂಟ್ಸ್ ಯೂತ್ ವಿಂಗ್ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

ಬದಿಯಡ್ಕ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ಮರ್ಚೆಂಟ್ಸ್ ಯೂತ್‌ವಿಂಗ್ ಬದಿಯಡ್ಕ ಇದರ ವಾರ್ಷಿಕ ಮಹಾಸಭೆ ಬದಿಯಡ್ಕ ವ್ಯಾಪಾರಿ ಭವನದಲ್ಲಿ ಜರಗಿತು. ಜಿಲ್ಲಾ ಯೂತ್ ವಿಂಗ್ ಅಧ್ಯಕ್ಷ ಸತ್ಯಕುಮಾರ್ ಉದ್ಘಾಟಿಸಿದರು. ಯೂನಿಟ್ ಅಧ್ಯಕ್ಷ ಮೊಹಮ್ಮದ್ ರಫೀಕ್ ಅಧ್ಯಕ್ಷತೆ ವಹಿಸಿದರು. ಮುಳ್ಳೇರಿಯ  ಯೂತ್ ವಿಂಗ್ ಘಟಕ ಅಧ್ಯಕ್ಷ ಪುಷ್ಪರಾಜ್ ಮುಳ್ಳೇರಿಯ, ಜಿಲ್ಲಾ ಕಾರ್ಯದರ್ಶಿ ಕುಂಜಾರು ಮಹಮ್ಮದ್ ಹಾಜಿ, ಬದಿಯಡ್ಕ ಘಟಕಾಧ್ಯಕ್ಷ ನರೇಂದ್ರ ಬಿ.ಎನ್, ಪ್ರಧಾನ ಕಾರ್ಯದರ್ಶಿ ರವಿ ಎಂ, ಕೋಶಾಧಿಕಾರಿ ಜ್ಞಾನದೇವ ಶೆಣೈ ಶುಭ ಕೋರಿದರು. ನೂತನ ಪದಾಧಿಕಾರಿ ಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಪೈ, ಕಾರ್ಯದರ್ಶಿಯಾಗಿ ಮಹಮ್ಮದ್ ಶಾಹಿದ್, ಕೋಶಾಧಿಕಾರಿ ಯಾಗಿ ಜೋನ್ ಪ್ರಶಾಂತ್ ಡಿಸೋಜಾ ಹಾಗೂ 14 ಜನರ ಕಾರ್ಯಕಾರಿ ಸಮಿತಿ ರೂಪೀಕರಿಸ ಲಾಯಿತು. ಯೂನಿಟ್‌ನ ಪ್ರಧಾನ ಕಾರ್ಯ ದರ್ಶಿ ಸುಬ್ರಹ್ಮಣ್ಯ ಪೈ ಸ್ವಾಗತಿಸಿ, ಕೋಶಾಧಿಕಾರಿ ಮೊಹಮ್ಮದ್ ಶಾಹಿದ್ ವಂದಿಸಿದರು.

RELATED NEWS

You cannot copy contents of this page