ಬದಿಯಡ್ಕದಲ್ಲಿ ಕೆ. ಕರುಣಾಕರನ್ ಸಂಸ್ಮರಣೆ
ಬದಿಯಡ್ಕ: ಮಾಜಿ ಮುಖ್ಯಮಂತ್ರಿ ದಿ| ಕೆ. ಕರುಣಾಕರನ್‌ರ 14ನೇ ಸಂಸ್ಮರಣಾ ವಾರ್ಷಿಕ ಬದಿಯಡ್ಕ ಮಂಡಲ ಕಾಂಗ್ರೆಸ್ ಕಚೇರಿಯಲ್ಲಿ ಜರಗಿತು. ಹಿರಿಯ ಮುಖಂಡ ಪಿ.ಜಿ. ಚಂದ್ರಹಾಸ ರೈ ಪುಷ್ಪಾರ್ಚನೆ ಗೈದು ಉದ್ಘಾಟಿಸಿದರು. ರಾಷ್ಟ್ರೀಯ ಕರ್ಷಕ ಕಾರ್ಮಿಕ ಸಂಘಟನೆ ಜಿಲ್ಲಾಧ್ಯಕ್ಷ ವಾಸುದೇವ ನಾಯರ್ ಮಾತನಾಡಿ ದರು. ಮಂಡಲ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದರು. ಕಾರಡ್ಕ ಬ್ಲೋಕ್ ಉಪಾಧ್ಯಕ್ಷ ನಾರಾಯಣ ಮಣಿಯಾಣಿ ನೀರ್ಚಾಲು, ಮಂಡಲ ಉಪಾಧ್ಯಕ್ಷೆ ಅನಿತಾ ಕ್ರಾಸ್ತ, ಕೃಷ್ಣದಾಸ್, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಶ್ರೀನಾಥ್, ಗೋಪಾಲ ಧರ್ಬೆತ್ತಡ್ಕ, ರಾಮ ಗೋಳಿಯಡ್ಕ ಮಾತನಾಡಿದರು.