ಬನ್ನಂಗಳ ತರವಾಡು ಗುರಿಕಾರ ನಿಧನ
ಉಪ್ಪಳ: ಕುಂಬಳೆ ಬಳಿಯ ಕಂಚಿಕಟ್ಟೆ ನಿವಾಸಿ ಆರಿಕ್ಕಾಡಿ ಪಾಡಾಂಗರ ಶ್ರೀ ಭಗವತೀ ಕ್ಷೇತ್ರದ ಬನ್ನಂಗಳ ತರವಾಡು ಗುರಿಕಾರ ನಾರಾಯಣ (78) ನಿಧನರಾದರು. ನಿನ್ನೆ ಬೆಳಿಗ್ಗೆ ಮನೆಯಲ್ಲಿ ಹೃದಯÁಘಾತ ಉಂಟಾಗಿದ್ದು, ಕೂಡಲೇ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನರಾದರು. ವಿವಿಧ ಕ್ಷೇತ್ರಗಳಲ್ಲಿ ಪಾರಂಪರಿಕ ವಾದ್ಯ ಸೇವೆ ನಡೆಸುತ್ತಿದ್ದರು. ಆರ್.ಎಸ್.ಎಸ್ನ ಹಿರಿಯ ಕಾರ್ಯಕರ್ತ, ತುರ್ತು ಪರಿಸ್ಥಿತಿ ವಿರುಧ್ದ ಹೋರಾಟ ನಡೆಸಿದ್ದರು. ಮೃತರು ಪತ್ನಿ ಭವಾನಿ, ಮಕ್ಕಳಾದ ಧನಲಕ್ಷಿ÷್ಮÃ, ದೀಪಕ್, ಪ್ರದೀಪ್, ಅಳಿಯ ಚಂದ್ರ, ಸೊಸೆಯಂದಿರಾದ ಮಲ್ಲಿಕ, ವೈಶಾಲಿ, ಸಹೋದರಿಯರಾದ ಗಿರಿಜ, ರಾಜೀವಿ, ಶಾಂಭವಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.