ಬಸ್ ಅಪಘಾತದಲ್ಲಿ ಸಾವು ಸಂಭವಿಸಿದಲ್ಲಿ ಆರು ತಿಂಗಳ ತನಕ ಪರ್ಮಿಟ್ ಅಮಾನತು
ತಿರುವನಂತಪುರ: ಬಸ್‌ಗಳು ಸ್ಪರ್ಧಾತ್ಮಕ ಹಾಗೂ ಅಮಿತ ವೇಗದಲ್ಲಿ ಸಾಗುವುದನ್ನು ತಡೆಗಟ್ಟಲು ಹಾಗೂ ರಸ್ತೆ ಸುರಕ್ಷತೆ ಖಾತರಿಪಡಿ ಸಲು ರಾಜ್ಯ ಸಾರಿಗೆ ಇಲಾಖೆ ಕಟ್ಟು ನಿಟ್ಟಿನ ಕ್ರಮ ಆರಂಭಿಸಿದೆ.
ಇದರಂತೆ ಖಾಸಗಿ ಬಸ್ ಅಪಘಾತದಲ್ಲಿ ಯಾರಾದರೂ ಸಾವನ್ನಪ್ಪಿದಲ್ಲಿ ಅಂತಹ ಬಸ್‌ಗಳ ಪರ್ಮಿಟ್‌ನ್ನು ಆರು ತಿಂಗಳ ತನಕ ಅಮಾನತುಗೊಳಿಸಲಾಗುವುದು. ಅಪಘಾತದಲ್ಲಿ ಯಾರಾದರೂ ಗಂಭೀರ ಗಾಯಗೊಂಡಲ್ಲಿ ಅಂತಹ ಬಸ್‌ಗಳ ಪರ್ಮಿಟನ್ನು ಮೂರು ತಿಂಗಳ ತನಕ ಅಮಾನತುಗೊಳಿಸ ಲಾಗುವುದು. ಇದು ಮಾತ್ರವಲ್ಲ ಅಪಘಾತಕ್ಕೊಳಗಾಗುವ ಬಸ್‌ಗಳ ಚಾಲಕನ ಲೈಸನ್ಸ್‌ನ್ನೂ ರದ್ದುಪಡಿಸಲಾಗುವುದು.
ಖಾಸಗಿ ಬಸ್‌ಗಳಲ್ಲಿ ಚಾಲಕ, ನಿರ್ವಾಹಕ ಮತ್ತು ಕ್ಲೀನರ್‌ಗಳನ್ನು ನೇಮಿಸಲು ಪೊಲೀಸ್ ವೆರಿಫಿಕೇಶನ್ ಕಡ್ಡಾಯಗೊಳಿಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಇವರು ಯಾವುದೇ ಕ್ರಿಮಿನಲ್ ಪ್ರಕರಣಗಳಲ್ಲಿ ಶಾಮೀಲಾಗಿಲ್ಲ ಎಂಬುವುದನ್ನು ಖಾತರಿಪಡಿಸುವ ಸಲುವಾಗಿ ಇಂತಹ ಕ್ರಮ ಕೈಗೊಳ್ಳಲಾಗುತ್ತಿದೆಯೆಂದು ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಲು ಬಸ್ ಕಾರ್ಮಿಕರಿಗೆ ತರಬೇತಿ ನೀಡುವ ತೀರ್ಮಾನವನ್ನು ಇಲಾಖೆ ಕೈಗೊಂಡಿದೆ. ಅಮಿತ ವೇಗದಲ್ಲಿ ಸಾಗುವ ಬಸ್‌ಗಳ ಬಗ್ಗೆ ಜನರಿಗೆ ದೂರು ನೀಡಲು ಸಹಾಯವಾಗುವ ರೀತಿಯಲ್ಲಿ ಬಸ್‌ಗಳ ಹಿಂದುಗಡೆ ಫೋನ್ ನಂಬ್ರ ದಾಖಲಿಸುವುದನ್ನು ಕಡ್ಡಾಯಗೊಳಿಸಲಾ ಗುವುದು. ಸರಿಯಾದ ಸಮಯದಲ್ಲಿ ಸೇವೆ ನಡೆಸಲಾಗುತ್ತಿದೆಯೆಂಬುವುದನ್ನು ಖಾತರಿಪಡಿಸಲು ಬಸ್‌ಗಳಲ್ಲಿ ಜಿಯೋ ಟಾಗ್ ಅಳವಡಿಸಲಾಗು ವುದು. ಸಮಯ ಬದಲಾಯಿಸಿ ಸೇವೆ ನಡೆಸುವ ಬಸ್‌ಗಳಿಂದ ಜುಲ್ಮಾನೆ ವಸೂಲಿ ಮಾಡಲಾಗುವುದು.
ರಾತ್ರಿ ವೇಳೆ ಸೇವೆ ಹೊರತು ಪಡಿಸುವ ಬಸ್‌ಗಳ ಪರ್ಮಿಟ್ ರದ್ದುಪಡಿಸುವ ತೀರ್ಮಾನವನ್ನೂ ಇಲಾಖೆ ಕೈಗೊಂಡಿದೆ. ಇನ್ನೊಂದೆಡೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಕ್ಯಾಮರಾ ಅಳವಡಿಸುವ ಕ್ರಮಕ್ಕೂ ಚಾಲನೆ ನೀಡಲಿದೆ. ಖಾಸಗಿ ಬಸ್‌ಗಳಲ್ಲಿ ಕ್ಯಾಮರಾ ಅಳವಡಿಸಲು 2025 ಮಾರ್ಚ್ ತಿಂಗಳ ತನಕ ಸಮಯಾವಕಾಶ ನೀಡಲಾಗಿದೆ.