ಬಸ್ ಮಾಲಕ ಕುಸಿದು ಬಿದ್ದು ನಿಧನ
ಕಾಸರಗೋಡು: ಬಸ್ ಮಾಲಕ ಕುಸಿದು ಬಿದ್ದು ಮೃತಪಟ್ಟರು. ಹಕೀಂ ಬಸ್‌ಗಳ ಮಾಲಕ ಹಾಗೂ ಪಾಲಕುನ್ನು ಮುದಿಯಕ್ಕಾಲ್ ನಿವಾಸಿ ಎನ್.ಪಿ. ಇಬ್ರಾಹಿಂ (65) ಮೃತಪಟ್ಟವರು. ನಿನ್ನೆ ಬೆಳಿಗ್ಗೆ ಘಟನೆ ನಡೆದಿದೆ. ಅಂಗಡಿಗೆ ತೆರಳಿ ಸಾಮಗ್ರಿಗಳನ್ನು ಖರೀದಿಸಿದ ಬಳಿಕ ಮಧುಮೇಹ ತಪಾಸಣೆ ನಡೆಸಿ ಮನೆಗೆ ಹಿಂತಿರುಗಿದ್ದರು. ಮನೆಯಲ್ಲಿ ವಿಶ್ರಾಂತಿಯಲ್ಲಿ ರುವ ವೇಳೆ ಕುಸಿದು ಬಿದ್ದಿದ್ದಾರೆ. ಈ ಮೊದಲು ಹೃದಯ ಶಸ್ತ್ರಚಿಕಿತ್ಸೆ ನಡೆಸಲಾ ಗಿತ್ತು. ಮೃತರು ಪತ್ನಿ ಸಫಿಯ, ಮಕ್ಕಳಾದ ಸಬೀರ್, ರಾಶಿದ್, ಫಿರೋಸ್, ಇಸ್ಮಾಯಿಲ್, ಇಝಾಮ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.