ಬಸ್‌ನಲ್ಲಿ ಕುಸಿದುಬಿದ್ದ ಅಡೂರು ನಿವಾಸಿ ಆಸ್ಪತ್ರೆಯಲ್ಲಿ ಮೃತ್ಯು

ಅಡೂರು: ವಿವಾಹ ಸಮಾರಂ ಭದಲ್ಲಿ ಭಾಗವಹಿಸಲು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಅಡೂರು ನಿವಾಸಿ ಬಸ್ಸಿನೊಳಗೆ ದಿಢೀರ್ ಕುಸಿದು ಬಿದ್ದು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವನ್ನಪ್ಪಿದ ಘಟನೆ ಕಾಸರಗೋಡು ನಗರದಲ್ಲಿ ನಡೆದಿದೆ.   ಬಳವಂತಡ್ಕ ನಿವಾಸಿ ಕೃಷ್ಣ ನಾಯ್ಕ (೫೬) ಎಂಬವರು ಸಾವನ್ನಪ್ಪಿದ ವ್ಯಕ್ತಿ. ಇವರು ಅಡೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದರಲ್ಲಿ ಕೊಟ್ಟೋಡಿಯಿಂದ ಬಸ್ಸಿಗೇರಿದ್ದರು.  ಬಸ್ ಕಾಸರಗೋಡು ಹಳೆ ಬಸ್ ನಿಲ್ದಾಣಕ್ಕೆ ತಲುಪಿದಾಗ ಎಲ್ಲರೂ ಬಸ್ಸಿನಿಂದ ಇಳಿದರೂ ಕೃಷ್ಣ ನಾಯ್ಕ್ ಮಾತ್ರ ಇಳಿಯಲಿಲ್ಲ. ಇದರಿಂದ ಶಂಕೆಗೊಂಡ ಬಸ್ ಕಾರ್ಮಿ ಕರು ಅವರನ್ನು ತಕ್ಷಣ ಜನರಲ್ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ಕೊಡಿಸಿದರೂ ಅದು ಪ್ರಯೋಜನ ವಾಗದೆ ಸಾವನ್ನಪ್ಪಿದ್ದಾರೆ.

ಮೃತ ವ್ಯಕ್ತಿಯ ಬಳಿಯಿದ್ದ ಗುರುತುಪತ್ರದಿಂದ ಅವರ ಗುರುತುಪತ್ತೆಹಚ್ಚಲಾಗಿದೆ. ಕೃಷ್ಣ ನಾಯ್ಕ ಪಾಂಡಿ ಅಂಚೆ ಕಚೇರಿಯಲ್ಲಿ ಕಳೆದ ೨೬ ವರ್ಷಗಳಿಂದ ಜಿಡಿಎಸ್ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ ಸುಶೀಲಾ, ಮಕ್ಕಳಾದ ಅಜಿತ್, ಮಮತಾ, ಅಳಿಯ ಸತೀಶ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page