ಬಸ್‌ನಲ್ಲಿ ಮಹಿಳೆಯ ಬ್ಯಾಗ್ ಕಳವು ಮೂವರು ಮಹಿಳೆಯರು ಕಸ್ಟಡಿಗೆ
ಉಪ್ಪಳ: ಬಸ್ ಪ್ರಯಾಣ ಮಧ್ಯೆ ಮಹಿಳೆಯ ಮೊಬೈಲ್ ಫೋನ್ ಹಾಗೂ 8000 ರೂಪಾಯಿ ಇದ್ದ ಬ್ಯಾಗ್ ಕಳವು ಗೈದ ಪ್ರಕರಣದಲ್ಲಿ ತಮಿಳುನಾಡು ನಿವಾಸಿಗಳಾದ ಮೂವರು ಮಹಿಳೆಯರನ್ನು ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಕಾಸರ ಗೋಡು ಮಹಿಳಾ ಪೊಲೀಸ್ ಠಾಣೆಯಲ್ಲಿ ಹಾಜರುಪಡಿಸಿರುವ ಇವರನ್ನು ಸಮಗ್ರವಾಗಿ ತನಿಖೆಗೊಳಪಡಿಸಿದ ಬಳಿಕ ಇಂದು ಬಂಧನ ದಾಖಲಿಸುವ ಸಾಧ್ಯತೆ ಇದೆ. ಹಲವು ಕಳವು ಪ್ರಕರಣಗಳಲ್ಲಿ ಶಾಮೀಲಾದವರು ಇವರಾಗಿದ್ದಾ ರೆಂದು ಪೊಲೀಸರು ತಿಳಿಸಿದ್ದಾರೆ.
ಮಂಜೇಶ್ವರ ಕುಂಜತ್ತೂರು ಮಾಡದ ಪ್ರಭಾಕರ ಎಂಬವರ ಪತ್ನಿ ತಾರಾಮಣಿ (59) ಮೊನ್ನೆ ಮಧ್ಯಾಹ್ನ ಕರ್ನಾಟಕ ರಾಜ್ಯ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಬ್ಯಾಗ್ ಕಳೆದುಹೋಗಿತ್ತು. ಈ ಬಗ್ಗೆ ನೀಡಿದ ದೂರಿನಂತೆ ಕೇಸು ದಾಖಲಿಸಿಕೊಂಡ ಪೊಲೀಸರು ವಿವಿಧೆಡೆಗಳ ಸಿಸಿಕ್ಯಾಮರಾಗಳ ದೃಶ್ಯಗಳನ್ನು ಪರಿಶೀಲಿಸಿ ಕಳವು ಆರೋಪಿಗಳನ್ನು ಕಸ್ಟಡಿಗೆ ತೆಗೆದಿದ್ದಾರೆ.