ಬಾಡಿಗೆಗೆ ವಾಸ ಮಾಡಿ ಗಾಂಜಾ ಸಂಗ್ರಹ: ಪತಿ ಪರಾರಿ; ಪತ್ನಿ ಸೆರೆ

ತಿರುವನಂತಪುರ: ದಂಪತಿ ಯರು ಬಾಡಿಗೆಗೆ ವಾಸಮಾಡುವ ಮನೆಯಲ್ಲಿ ಅಬಕಾರಿ ದಳ ನಡೆಸಿದ ದಾಳಿಯಲ್ಲಿ 20 ಕಿಲೋಗಿಂತಲೂ ಹೆಚ್ಚು ಗಾಂಜಾವನ್ನು ವಶಪಡಿಸ ಲಾಗಿದೆ. ಆರ್ಯನಾಡ್ ಪರಂಡೋತ್ ನಿವಾಸಿಗಳಾದ ಮನೋಜ್ (24), ಭುವನೇಶ್ವರಿ (23) ಎಂಬಿವರು ವಾಸ ಮಾಡುವ ನೆಡುಮಂಙಾಡ್ ಮಂಜಚಾಂಬುಪುರದಲ್ಲಿ ಅಬಕಾರಿ ದಳ ದಾಳಿ ನಡೆಸಿದೆ. ಮಲಗುವ ಕೊಠಡಿಯ ಮಂಚದಡಿಯಲ್ಲಿ ಗಾಂಜಾವನ್ನು ಪ್ಲಾಸ್ಟಿಕ್ ಗೋಣಿಯಲ್ಲಿ ತೆಗೆದಿರಿಸಿದ ರೀತಿಯಲ್ಲಿ ಕಂಡು ಬಂದಿತ್ತು.

ಅಬಕಾರಿ ತಂಡ ತಲುಪಿದಾಗ ಮನೋಜ್ ಪರಾರಿಯಾಗಿದ್ದು, ಪತ್ನಿಯನ್ನು ಸೆರೆ ಹಿಡಿಯಲಾಗಿದೆ. ಇವರು ವಿವಿಧ ಮನೆಗಳಲ್ಲಿ ಬಾಡಿಗೆಗೆ ವಾಸ ಮಾಡಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದರೆಂದು ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಅಬಕಾರಿ ದಳ ದಾಳಿ ನಡೆಸಿತ್ತು. ಸಿಐ ಎಸ್.ಜಿ. ಅಲವಿಂದ್, ಅಸಿಸ್ಟೆಂಟ್ ಇನ್ಸ್‌ಪೆಕ್ಟರ್ ವಿ. ಅನಿಲ್ ಕುಮಾರ್, ರಂಜಿತ್, ಬಿಜು ಸಹಿತ ಹಲವರು ದಾಳಿಗೆ ನೇತೃತ್ವ ನೀಡಿದರು.

You cannot copy contents of this page