ಪೈವಳಿಕೆ: ಬಾಯಾರುಪದವು ಬಸ್ ತಂಗುದಾಣದಲ್ಲಿ ಮೂರು ಕೋಣಗಳು ನಿತ್ಯ ತಂಗುತ್ತಿರುವುದು ಸಾರ್ವಜನಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಗಾಳಿಯಡ್ಕ ನಿವಾಸಿಯೊಬ್ಬರ ಕೋಣಗಳು ಇವುಗಳಾಗಿದ್ದು, ಬೆಳಿಗ್ಗೆ ಮೇಯಲು ಬಿಟ್ಟ ಬಳಿಕ ಇವು ನೇರವಾಗಿ ಬಾಯಾರುಪದವು ಬಸ್ ತಂಗುದಾಣ ಸಮೀಪಕ್ಕೆ ತಲುಪಿ ಇಲ್ಲೇ ಆಶ್ರಯ ಪಡೆಯುತ್ತಿವೆ ಎಂದು ನಾಗರಿಕರು ದೂರುತ್ತಿದ್ದಾರೆ. ಬಸ್ ತಂಗುದಾ ಣದೊಳಗೆ ಕೋಣಗಳು ತಂಗುತ್ತಿರು ವುದರಿಂದ ಪ್ರಯಾಣಿಕರಿಗೆ ಅದರೊ ಳಗೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಪಂಚಾಯತ್ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮವುಂಟಾಗಿಲ್ಲವೆಂದು ನಾಗರಿಕರು ತಿಳಿಸುತ್ತಿದ್ದಾರೆ.
