ಬಾಲಕನ ದೇಹದ ಗುಪ್ತ ಭಾಗ ಸ್ಪರ್ಶಿಸಿದ ಚಿಕನ್ ಸ್ಟಾಲ್ ಮಾಲಕ ಸೆರೆ

ಕುಂಬಳೆ: ಮಾಂಸ ಖರೀದಿಸಲು ಬಂದ ಬಾಲಕನ ದೇಹದ ಗುಪ್ತ ಭಾಗದಲ್ಲಿ ಸ್ಪರ್ಶಿಸಿದ ಚಿಕನ್ ಸ್ಟಾಲ್ ಮಾಲಕನನ್ನು ಬಂಧಿಸಲಾಗಿದೆ. ಕಳತ್ತೂರು ಚೆಕ್ ಪೋಸ್ಟ್ ಬಳಿಯ ಚಿಕನ್ ಸ್ಟಾಲ್ ಮಾಲಕನಾದ ಮೊಯ್ದೀನ್ (65) ಎಂಬಾತನನ್ನು ಕುಂಬಳೆ ಎಸ್‌ಐ ಕೆ. ಶ್ರೀಜೇಶ್ ಪೋಕ್ಸೋ ಪ್ರಕಾರ ಬಂಧಿಸಿದ್ದಾರೆ. ಇತ್ತೀಚೆಗೆ ಮೊಯ್ದೀನ್‌ನ ಚಿಕನ್ ಸ್ಟಾಲ್‌ನಿಂದ ಕೋಳಿ ಮಾಂಸ ಖರೀದಿಸಲು ಬಾಲಕನೋರ್ವ ಅಲ್ಲಿಗೆ ಬಂದಿದ್ದನೆನ್ನಲಾಗಿದೆ.ಈ ವೇಳೆ ಮೊಯ್ದೀನ್ ಬಾಲಕನ ಗುಪ್ತ ಭಾಗದಲ್ಲಿ ಸ್ಪರ್ಶಿಸಿರುವುದಾಗಿ ದೂರ ಲಾಗಿದೆ.  ಸೆರೆಗೀಡಾದ ಮೊಯ್ದೀ ನ್‌ಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ.

RELATED NEWS

You cannot copy contents of this page