ಬಾಲಕಿಗೆ ಕಿರುಕುಳ: ಗಾಯಕನ ವಿರುದ್ಧ ಪೋಕ್ಸೋ ಕೇಸು
ಕಾಸರಗೋಡು: 14ರ ಹರೆ ಯದ ಬಾಲಕಿಗೆ ಕಿರುಕುಳ ನೀಡ ಲಾಯಿತೆಂಬ ಆರೋಪದಂತೆ ಗಾಯಕನ ವಿರುದ್ಧ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿ ಕೊಂಡಿದ್ದಾರೆ. ಕಿರುಕುಳ ವಿಷಯ ತಿಳಿದಿದ್ದರೂ ಅದನ್ನು ಮುಚ್ಚಿಡಲಾ ಯಿತೆಂಬ ಆರೋಪದಂತೆ ಆರೋಪಿಯ ಪತ್ನಿಯ ವಿರುದ್ಧವೂ ಕೇಸು ದಾಖಲಿಸಲಾಗಿದೆ. ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಕರುಣಾಕರನ್ (48) ಎಂಬಾತನ ವಿರುದ್ಧ ಕೇಸು ದಾಖ ಲಿಸಲಾಗಿದೆ. ಈತನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಬಾಲಕಿಗೆ ಕಿರುಕುಳ ನೀಡಿದ ವಿಷಯ ಕರುಣಾಕರನ್ನ ಪತ್ನಿಗೆ ತಿಳಿದಿತ್ತೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪತ್ನಿಯನ್ನೂ ಆರೋಪಿಯಾಗಿ ಸೇರಿಸಲಾಗಿದೆ.