ಬಾಲಕಿಗೆ ದೌರ್ಜನ್ಯ: ತಲೆಮರೆಸಿಕೊಂಡಿದ್ದ ಸಿಪಿಎಂ ಕಾರ್ಯಕರ್ತ ಸೆರೆ

ಕೊಚ್ಚಿ: ನಾಲ್ಕು ವರ್ಷ ಪ್ರಾಯದ ಬಾಲಕಿಯನ್ನು ದೌರ್ಜನ್ಯಗೈದ ಪ್ರಕರಣದಲ್ಲಿ ಆರೋಪಿ ಬಿ.ಕೆ. ಸುಬ್ರಹ್ಮಣ್ಯನ್ ಸೆರೆಯಾಗಿದ್ದಾನೆ. ಚೆಂಙಮನಾಡ್ ಪೊಲೀಸರು ಈತನನ್ನು ಸೆರೆ ಹಿಡಿದಿದ್ದಾರೆ. ಒಂದು ವಾರದಿಂದ ಈತ ತಲೆಮರೆಸಿಕೊಂಡಿದ್ದಾನೆ.

ಈ ತಿಂಗಳ 12ರಂದು ದೌರ್ಜನ್ಯ ಪ್ರಕರಣ ನಡೆದಿತ್ತು. ಇದು ಬಹಿರಂಗಗೊಂಡಿರುವುದ ರೊಂದಿಗೆ ಸಿಪಿಎಂ ಕಾರ್ಯಕರ್ತ ನಾದ ಈತನನ್ನು ಪಕ್ಷದಿಂದ ಹೊರ ಹಾಕಲಾಗಿತ್ತು. ಆರೋಪಿಯನ್ನು ಪಕ್ಷ ಸಂರಕ್ಷಿಸುತ್ತಿದೆ ಎಂಬ ಆರೋಪ ಮೂಡಿ ಬಂದ ಹಿನ್ನೆಲೆ ಯಲ್ಲಿ ಈತನ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು.  ಕಳೆದ ೧೫ರಂದು ಕುಟುಂಬ ಪೊಲೀಸರಲ್ಲಿ ದೂರು ನೀಡಿದ್ದರು. ಕೇಸು ದಾಖಲಿಸಿದ ಬೆನ್ನಲ್ಲೇ ಈತ ತಲೆಮರೆಸಿಕೊಂ ಡಿದ್ದನು. ಮನೆಗೆ ತಲುಪಿದ ಬಾಲಕಿ ಅಸ್ವಸ್ಥತೆ ಪ್ರಕಟಪಡಿಸಿದ ಹಿನ್ನೆಲೆಯಲ್ಲಿ ಶಂಕೆ ತಾಳಿದ ಹೆತ್ತವರು ಪರಿಶೀಲಿಸಿದಾಗ ದೌರ್ಜನ್ಯ ಗೈದ ಬಗ್ಗೆ ಖಚಿತಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದ್ದು, ಮೆಜಿಸ್ಟ್ರೇಟ್ ಬಾಲಕಿಯ ರಹಸ್ಯ ಹೇಳಿಕೆ ದಾಖಲುಪಡಿಸಿದ್ದಾರೆ.

You cannot copy contents of this page