ಬಾಲಕಿಯ ಭಾವಚಿತ್ರ ಮೋರ್ಫ್ ಮಾಡಿ ಪ್ರಚಾರ: ತನಿಖೆ ಬದಿಯಡ್ಕ ಪೊಲೀಸರಿಗೆ ಹಸ್ತಾಂತರ: ಆರೋಪಿಗಾಗಿ ಶೋಧ
ಬದಿಯಡ್ಕ: ಪ್ರಾಯಪೂರ್ತಿಯಾಗದ ಬಾಲಕಿಯ ಭಾವಚಿತ್ರವನ್ನು ಮೋರ್ಫ್ ಮಾಡಿ ಪ್ರಚಾರಗೈದ ಬಗ್ಗೆ ಲಭಿಸಿದ ದೂರಿನಂತೆ ಸೈಬರ್ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ಪ್ರಕರಣ ನಡೆದಿರುವುದು ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಾದುದರಿಂದ ತನಿಖೆಯನ್ನು ಬದಿಯಡ್ಕ ಪೊಲೀಸರಿಗೆ ವಹಿಸಿಕೊಡಲಾಗಿದೆ.
ತನ್ನ ಭಾವಚಿತ್ರವನ್ನು ಮೋರ್ಫ್ ಮಾಡಿ ಪ್ರಚಾರ ಗೈದಿರುವ ಬಗ್ಗೆ ಆರೋಪಿಸಿ ಬಾಲಕಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದಳು. ಇದರಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೂರು ಮೊಬೈಲ್ ನಂಬ್ರಗಳನ್ನು ಹೊಂದಿರುವ ವ್ಯಕ್ತಿ ಬಾಲಕಿಯ ಫೋಟೋವನ್ನು ಮೋರ್ಫ್ ಮಾಡಿ ಪ್ರಚಾರಗೈದಿರುವುದಾಗಿ ತನಿಖೆಯಲ್ಲಿ ತಿಳಿದು ಬಂದಿದೆ. ಇದರಂತೆ ತನಿಖೆ ಆರಂಭಿಸಿದ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.