ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದ ಆರೋಪಿಗೆ ರಿಮಾಂಡ್
ಕುಂಬಳೆ: ಮೈದಾನದಲ್ಲಿ ಆಟವಾಡುತ್ತಿದ್ದ ಹತ್ತರ ಹರೆಯದ ಬಾಲಕಿಯನ್ನು ಕಿರುಕುಳ ಉದ್ದೇಶ ದಿಂದ ಪುಸಲಾಯಿಸಿ ಕರೆದೊಯ್ದ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ವೀರನಗರದ ಪವಿತ್ರ ಕುಮಾರ್ (೫೫) ಎಂಬಾತನಿಗೆ ರಿಮಾಂಡ್ ವಿಧಿಸಲಾಗಿದೆ. ಮೊನ್ನೆ ಸಂಜೆ ಮೈದಾನದಲ್ಲಿ ಆಟವಾಡುತ್ತಿದ್ದ ಬಾಲಕಿಯನ್ನು ಆರೋಪಿ ಕಟ್ಟಡದೊಳಗೆ ಕರೆದೊಯ್ಯು ತ್ತಿರುವುದನ್ನು ಕಂಡ ನಾಗರಿಕರು ಆತನನ್ನು ಹಿಡಿದು ಕುಂಬಳೆ ಪೊಲೀಸರಿಗೆ ಹಸ್ತಾಂತರಿಸಿದ್ದರು. ಇದರಂತೆ ಆರೋಪಿ ವಿರುದ್ಧ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದರು.